alex Certify ಹಳೆಯ ವಾಹನ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆಯ ವಾಹನ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಆಫರ್​..!

ನಿಮ್ಮ ವಾಹನ ಹಳೆಯದಾಗಿದ್ದು ಹೊಸ ವಾಹನ ಖರೀದಿ ಮಾಡಲು ಪ್ರಯತ್ನಿಸ್ತಾ ಇದ್ದರೆ ನಿಮಗೊಂದು ಗುಡ್​ ನ್ಯೂಸ್​ ಇದೆ. ಸ್ಕ್ರ್ಯಾಪಿಂಗ್​ ಪಾಲಿಸಿ ಅಡಿಯಲ್ಲಿ ನೀವು ನಿಮ್ಮ ಹಳೆಯ ವಾಹನವನ್ನ ಸ್ಕ್ರಾಪ್​ ಮಾಡಿ ಹೊಸ ವಾಹನವನ್ನ ಖರೀದಿ ಮಾಡಿದ್ರೆ ನಿಮಗೆ 5 ಪ್ರತಿಶತದವರೆಗೆ ರಿಯಾಯಿತಿ ಸಿಗಲಿದೆ. ಈ ಬಗ್ಗೆ ಸ್ವತಃ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಹಳೆಯ ವಾಹನಗಳನ್ನ ಸ್ಕ್ರ್ಯಾಪ್​ ಮಾಡಿದರೆ ವಾಹನ ಮಾರಾಟಗಾರ ಕಂಪನಿಗಳು ಗ್ರಾಹಕರಿಗೆ ಹೊಸ ವಾಹನ ಖರೀದಿ ವೇಳೆಯಲ್ಲಿ ರಿಯಾಯಿತಿ ನೀಡಲಿವೆ ಎಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್​​ನಲ್ಲಿ ವಾಹನ ಸ್ಕ್ರಾಪಿಂಗ್​ ನೀತಿಯನ್ನ ಪರಿಚಯಿಸಲಾಗಿತ್ತು. ದೇಶದಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಆಟೋ ಮೊಬೈಲ್​ ಕ್ಷೇತ್ರವನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಪಾಲಿಸಿಯನ್ನ ತರಲಾಗಿದೆ.

ಈ ಹೊಸ ನೀತಿಯಿಂದಾಗಿ ಹಳೆಯ ವಾಹನಗಳು ಇನ್ಮೇಲೆ ಫಿಟ್​ನೆಸ್​ ಪರೀಕ್ಷೆಯನ್ನ ಮಾಡಿಸಿಕೊಳ್ಳಬೇಕು.  20 ವರ್ಷ ಹಳೆಯ ವೈಯಕ್ತಿಕ ಬಳಕೆ ವಾಹನಗಳು ಹಾಗೂ 15 ವರ್ಷ ಹಳೆಯ ವಾಣಿಜ್ಯ ವಾಹನಗಳು ಈ ಫಿಟ್​ನೆಟ್​ ಪರೀಕ್ಷೆಗೆ ಒಳಗಾಗವೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ದೇಶದ ವಿವಿಧೆಡೆ ಆಟೋಮೇಟೆಡ್​ ಫಿಟ್​ನೆಸ್​ ಕೇಂದ್ರಗಳನ್ನ ತೆರೆಯಲು ತಯಾರಿ ನಡೆಸುತ್ತಿದೆ.

ವರದಿಗಳ ಪ್ರಕಾರ, ಫಿಟ್​ನೆಸ್​ ಪರೀಕ್ಷೆ ನಡೆಸಲು ಅಂದಾಜು 40 ಸಾವಿರ ರೂಪಾಯಿ ವೆಚ್ಚವಾಗಬಹುದು. ಒಮ್ಮೆ ಮಾಡಿಸಿದ ಫಿಟ್​ನೆಸ್​ ಪರೀಕ್ಷೆ ಪ್ರಮಾಣ ಪತ್ರ 5 ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರಲಿದೆ. ಈ ಫಿಟ್​ನೆಸ್​ ಪರೀಕ್ಷೆಯಲ್ಲಿ ಪಾಸ್​ ಆದ ಬಳಿಕವೇ ಹಳೆಯ ವಾಹನಗಳು ರಸ್ತೆಯ ಮೇಲೆ ಓಡಾಡಬಹುದಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ ಅಂತಹ ವಾಹನಗಳನ್ನ ನೋಂದಣಿ ಮಾಡಲಾಗುವುದಿಲ್ಲ. ಇಂತಹ ವಾಹನಗಳು ಸ್ಕ್ರ್ಯಾಪಿಂಗ್​ಗೆ ಒಳಗಾಗಬೇಕಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...