ನಿಮ್ಮ ವಾಹನ ಹಳೆಯದಾಗಿದ್ದು ಹೊಸ ವಾಹನ ಖರೀದಿ ಮಾಡಲು ಪ್ರಯತ್ನಿಸ್ತಾ ಇದ್ದರೆ ನಿಮಗೊಂದು ಗುಡ್ ನ್ಯೂಸ್ ಇದೆ. ಸ್ಕ್ರ್ಯಾಪಿಂಗ್ ಪಾಲಿಸಿ ಅಡಿಯಲ್ಲಿ ನೀವು ನಿಮ್ಮ ಹಳೆಯ ವಾಹನವನ್ನ ಸ್ಕ್ರಾಪ್ ಮಾಡಿ ಹೊಸ ವಾಹನವನ್ನ ಖರೀದಿ ಮಾಡಿದ್ರೆ ನಿಮಗೆ 5 ಪ್ರತಿಶತದವರೆಗೆ ರಿಯಾಯಿತಿ ಸಿಗಲಿದೆ. ಈ ಬಗ್ಗೆ ಸ್ವತಃ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಹಳೆಯ ವಾಹನಗಳನ್ನ ಸ್ಕ್ರ್ಯಾಪ್ ಮಾಡಿದರೆ ವಾಹನ ಮಾರಾಟಗಾರ ಕಂಪನಿಗಳು ಗ್ರಾಹಕರಿಗೆ ಹೊಸ ವಾಹನ ಖರೀದಿ ವೇಳೆಯಲ್ಲಿ ರಿಯಾಯಿತಿ ನೀಡಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್ನಲ್ಲಿ ವಾಹನ ಸ್ಕ್ರಾಪಿಂಗ್ ನೀತಿಯನ್ನ ಪರಿಚಯಿಸಲಾಗಿತ್ತು. ದೇಶದಲ್ಲಿ ಮಾಲಿನ್ಯ ನಿಯಂತ್ರಣ ಹಾಗೂ ಆಟೋ ಮೊಬೈಲ್ ಕ್ಷೇತ್ರವನ್ನ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈ ಪಾಲಿಸಿಯನ್ನ ತರಲಾಗಿದೆ.
ಈ ಹೊಸ ನೀತಿಯಿಂದಾಗಿ ಹಳೆಯ ವಾಹನಗಳು ಇನ್ಮೇಲೆ ಫಿಟ್ನೆಸ್ ಪರೀಕ್ಷೆಯನ್ನ ಮಾಡಿಸಿಕೊಳ್ಳಬೇಕು. 20 ವರ್ಷ ಹಳೆಯ ವೈಯಕ್ತಿಕ ಬಳಕೆ ವಾಹನಗಳು ಹಾಗೂ 15 ವರ್ಷ ಹಳೆಯ ವಾಣಿಜ್ಯ ವಾಹನಗಳು ಈ ಫಿಟ್ನೆಟ್ ಪರೀಕ್ಷೆಗೆ ಒಳಗಾಗವೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ದೇಶದ ವಿವಿಧೆಡೆ ಆಟೋಮೇಟೆಡ್ ಫಿಟ್ನೆಸ್ ಕೇಂದ್ರಗಳನ್ನ ತೆರೆಯಲು ತಯಾರಿ ನಡೆಸುತ್ತಿದೆ.
ವರದಿಗಳ ಪ್ರಕಾರ, ಫಿಟ್ನೆಸ್ ಪರೀಕ್ಷೆ ನಡೆಸಲು ಅಂದಾಜು 40 ಸಾವಿರ ರೂಪಾಯಿ ವೆಚ್ಚವಾಗಬಹುದು. ಒಮ್ಮೆ ಮಾಡಿಸಿದ ಫಿಟ್ನೆಸ್ ಪರೀಕ್ಷೆ ಪ್ರಮಾಣ ಪತ್ರ 5 ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರಲಿದೆ. ಈ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದ ಬಳಿಕವೇ ಹಳೆಯ ವಾಹನಗಳು ರಸ್ತೆಯ ಮೇಲೆ ಓಡಾಡಬಹುದಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ ಅಂತಹ ವಾಹನಗಳನ್ನ ನೋಂದಣಿ ಮಾಡಲಾಗುವುದಿಲ್ಲ. ಇಂತಹ ವಾಹನಗಳು ಸ್ಕ್ರ್ಯಾಪಿಂಗ್ಗೆ ಒಳಗಾಗಬೇಕಾಗುತ್ತೆ.