alex Certify ಹೊಸ ವರ್ಷದ ಹೊತ್ತಲ್ಲೇ ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷದ ಹೊತ್ತಲ್ಲೇ ಜಿಯೋ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್

ಟೆಲಿಕಾಂ ಕ್ಷೇತ್ರದ ಪ್ರಮುಖ ಕಂಪನಿ ರಿಲಯನ್ಸ್ ಜಿಯೋ ಹೊಸ ವರ್ಷದ ವೇಳೆ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ಮತ್ತೊಮ್ಮೆ ಬೇರೆ ನೆಟ್​ವರ್ಕ್​ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಿದೆ.

ಜನವರಿ 1 ರಿಂದ ಈ ಹೊಸ ಕ್ರಮ ಜಾರಿಗೆ ಬರಲಿದ್ದು, ಟೆಲಿಕಾಂ ರೆಗ್ಯೂಲಾರಿಟಿ ಅಥಾರಿಟಿ ಆಫ್​ ಇಂಡಿಯಾ ಐಯುಸಿ ಶುಲ್ಕವನ್ನ ರದ್ದುಗೊಳಿಸಿದ ಹಿನ್ನೆಲೆ ಜಿಯೋ ಎಲ್ಲಾ ದೇಶಿ ನೆಟ್​​ವರ್ಕ್​ಗಳ ಕರೆಗೆ ವಿಧಿಸಲಾಗುತ್ತಿದ್ದ ಐಯುಸಿ ಶುಲ್ಕವನ್ನ ಕೊನೆಗೊಳಿಸಲಿದೆ.

ಈ ಹೊಸ ಕ್ರಮದಿಂದ ಜಿಯೋ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆ ಸೌಲಭ್ಯವನ್ನ ನೀಡಿದೆ. ಜಿಯೋದಿಂದ ಜಿಯೋಗೆ ಉಚಿತ ಕರೆ ಮೊದಲಿನಿಂದಲೂ ಇದೆ. ಇದೀಗ ಅನ್ಯ ನೆಟ್ವರ್ಕ್ ಕರೆ ಉಚಿತವಾಗಿರಲಿದೆ ಎಂದು ಜಿಯೋ ಮಾಹಿತಿ ನೀಡಿದೆ. ಸೆಪ್ಟೆಂಬರ್​ 19ರಂದು ಜಿಯೋ ಕಂಪನಿ ಬೇರೆ ನೆಟ್​ವರ್ಕ್​ಗೆ ಕರೆ ಮಾಡಿದರೆ ಅಂತಹ ಕರೆಗೆ ದರ ವಿಧಿಸೋದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು. ಆದರೆ ಇದೀಗ ತನ್ನ ನಿರ್ಧಾರವನ್ನ ಜಿಯೋ ಬದಲಾಯಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...