ನವದೆಹಲಿ: ಮೊಬೈಲ್ ಇಂಟರ್ನೆಟ್ ವಲಯದಲ್ಲಿ ಬಹುದೊಡ್ಡ ಬದಲಾವಣೆ ತಂದಿದ್ದ ರಿಲಯನ್ಸ್ ಜಿಯೋ ಈಗ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ.
ಕೇವಲ 2500 ರಿಂದ 3 ಸಾವಿರ ರೂಪಾಯಿಗೆ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ. ಮೊದಲಿಗೆ 5000 ರೂ. ದರದಲ್ಲಿ 5ಜಿ ಮೊಬೈಲ್ ಸೆಟ್ ಬಿಡುಗಡೆ ಮಾಡಲಿದ್ದು ಬೇಡಿಕೆ ಹೆಚ್ಚಾದಂತೆ ಬೆಲೆಯನ್ನು 2500 ರಿಂದ 3000 ರೂ.ಗೆ ಇಳಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.