ಮುಂಬೈ: ದೇಶದ ಪ್ರಮುಖ ಮೊಬೈಲ್ ಸೇವಾ ಕಂಪನಿಯಾದ ರಿಲಯನ್ಸ್ ಜಿಯೋ ಅತಿ ಅಗ್ಗದ ಪ್ರೀಪೇಯ್ಡ್ ಯೋಜನೆ ಪ್ರಕಟಿಸಿದೆ. ಕೇವಲ 1 ರೂಪಾಯಿಗೆ 30 ದಿನದ ವ್ಯಾಲಿಡಿಟಿ ಆಫರ್ ನೀಡಲಾಗಿದೆ.
ದೇಶದಲ್ಲಿ ಇದುವರೆಗೆ ಯಾವುದೇ ಟೆಲಿಕಾಂ ಕಂಪನಿ ಪ್ರಕಟಿಸದ ಕಡಿಮೆ ಬೆಲೆಯ ಪ್ಲಾನ್ ಇದಾಗಿದೆ. ಯಾವುದೇ ಗ್ರಾಹಕರು ಒಂದು ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಂಡರೆ ಒಂದು ತಿಂಗಳು ಯೋಜನೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಕರೆ ಸೌಲಭ್ಯ ಇರುವುದಿಲ್ಲ. 100 ಎಂಬಿ ಡೇಟಾ ಲಭ್ಯವಿದ್ದು, ಇದು ಮೊಬೈಲ್ ಆಪ್ ನಲ್ಲಿ ಲಭ್ಯವಿದೆ. ಮೈ ಜಿಯೋ ಆಪ್ ನಲ್ಲಿ ಇದನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.