ಗ್ರಾಹಕರನ್ನ ಸೆಳೆಯೋದಕ್ಕಾಗಿ ಟೆಲಿಕಾಂ ಕಂಪನಿಗಳು ಒಂದಿಲ್ಲೊಂದು ಆಫರ್ಗಳನ್ನ ನೀಡ್ತಾನೇ ಇವೆ. ಅತ್ಯಂತ ಕಡಿಮೆ ಬೆಲೆಗೆ ಹೆಚ್ಚು ಆಫರ್ಗಳನ್ನ ನೀಡುವ ಪ್ಲಾನ್ಗಳತ್ತಲೇ ಗ್ರಾಹಕರು ಮುಖ ಮಾಡ್ತಾರೆ. ಹೀಗಾಗಿ ಏರ್ಟೆಲ್ನಂತೆಯೇ ಜಿಯೋ ಕೂಡ 249 ರೂಪಾಯಿ ಪ್ಲಾನ್ ಒಂದನ್ನ ಪರಿಚಯಿಸಿದೆ.
ಆದರೆ ಉಳಿದ ಟೆಲಿಕಾಂ ಕಂಪನಿಗಿಂತ ಜಿಯೋದಲ್ಲಿ ಹೆಚ್ಚಿನ ಡೇಟಾ ಸಿಗಲಿದೆ.
ರಿಲಾಯನ್ಸ್ ಜಿಯೋದ ಅತ್ಯಂತ ಅಗ್ಗದ ಪ್ಲಾನ್ ಇದಾಗಿದೆ. ಈ ಪ್ಲಾನ್ನಲ್ಲಿ ನಿಮಗೆ ನಿತ್ಯ 2 ಜಿಬಿ ಡೇಟಾ ಸಿಗಲಿದೆ. ಹಾಗೂ 28 ದಿನಗಳವರೆಗೆ ವ್ಯಾಲಿಡಿಟಿ ಸಿಗಲಿದೆ. ಇಡೀ ಪ್ಲಾನ್ನಲ್ಲಿ ಬಳಕೆದಾರನಿಗೆ ಒಟ್ಟು 56 ಜಿಬಿ ಡೇಟಾ ಸಿಗಲಿದೆ. ಅಲ್ಲದೇ ಎಲ್ಲಾ ನೆಟ್ವರ್ಕ್ಗಳಿಗೆ ಕರೆ ಉಚಿತವಾಗಿ ಇರಲಿದೆ. ಇಷ್ಟು ಮಾತ್ರವಲ್ಲದೇ ನಿತ್ಯ 100 ಮೆಸೇಜ್ಗಳು ಫ್ರೀಯಾಗಿ ಸಿಗಲಿದೆ.