2021 ರ ದ್ವಿತೀಯಾರ್ಧದಲ್ಲಿ ಜಿಯೋ 5 ಜಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರಿಯಲ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಹೇಳಿದ್ದಾರೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್ 2020ರನ್ನ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ 5 ಜಿ ಆಗಮನದಿಂದ ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆಗೆ ರಿಲಯನ್ಸ್ ಜಿಯೋದ ಈ ಪ್ರಯತ್ನ ಇನ್ನಷ್ಟು ಬಲ ತುಂಬಲಿದೆ ಎಂದು ಹೇಳಿದ್ದಾರೆ.
ಜಿಯೋ 5 ಜಿಯನ್ನ ಭಾರತದಲ್ಲಿ 2020ರಲ್ಲಿ ಔಪಚಾರಿಕವಾಗಿ ರಿಲಯನ್ಸ್ ಇಂಡಸ್ಟ್ರಿಯಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಲಾಗಿದೆ.
ಆದರೆ 2021 ರ ಅಂತ್ಯದ ವೇಳೆಗೆ ಪ್ರತಿಯೊಬ್ಬ ಜಿಯೋ ಗ್ರಾಹಕನಿಗೂ 5 ಜಿ ನೆಟ್ ವರ್ಕ್ ಸಿಗಲಿದೆ. ಈ ಮೂಲಕ ರಿಲಯನ್ಸ್ ಜಿಯೋ ಭಾರತದಲ್ಲಿ ಡಿಜಿಟಲ್ ರೂಪಾಂತರಕ್ಕೆ ಶಾಶ್ವತ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.
ಭಾರತವು ವಿಶ್ವದ ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಈ ಮುನ್ನಡೆಯನ್ನ ಕಾಯ್ದುಕೊಳ್ಳುವ ಸಲುವಾಗಿ 5 ಜಿ ಆರಂಭಿಕ ರೋಲ್ ಔಟ್ನ್ನ ವೇಗಗೊಳಿಸಲು ಕೆಲ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತೆ. ರಿಲಯನ್ಸ್ ಜಿಯೋ 5ಜಿ ನೆಟ್ವರ್ಕ್ನೊಂದಿಗೆ 2021ರಲ್ಲಿ ನಾವು ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿ ಮಾಡಲಿದ್ದೇವೆ ಅಂತಾ ಮುಖೇಶ್ ಅಂಬಾನಿ ಭರವಸೆ ನೀಡಿದ್ದಾರೆ.