alex Certify BIG BREAKING: ಅಂದಾಜು ಮೀರಿದ ಆರ್ಥಿಕ ಬೆಳವಣಿಗೆ, ಜಿಡಿಪಿ ದರ ಶೇ. 8.7 ಕ್ಕೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಅಂದಾಜು ಮೀರಿದ ಆರ್ಥಿಕ ಬೆಳವಣಿಗೆ, ಜಿಡಿಪಿ ದರ ಶೇ. 8.7 ಕ್ಕೆ ಏರಿಕೆ

ನವದೆಹಲಿ: 2021 -22 ರಲ್ಲಿ ಭಾರತದ ಜಿಡಿಪಿ ದರ ಶೇಕಡ 8.7 ಕ್ಕೆ ಏರಿಕೆಯಾಗಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ GDP ಶೇ. 4.1 ರಷ್ಟು ಬೆಳವಣಿಗೆ ಕಂಡಿದೆ.

2021-22 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇಕಡ 4.1 ರಷ್ಟು ಬೆಳೆದಿದೆ. ಇದು ವಾರ್ಷಿಕ ಬೆಳವಣಿಗೆಯ ದರವನ್ನು ಶೇಕಡ 8.7 ಕ್ಕೆ ಏರಿಸಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ.

ಆದಾಗ್ಯೂ, ಜನವರಿ-ಮಾರ್ಚ್ ಅವಧಿಯಲ್ಲಿ ಬೆಳವಣಿಗೆಯು 2021-22 ರ ಹಿಂದಿನ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 5.4 ವಿಸ್ತರಣೆಗಿಂತ ನಿಧಾನವಾಗಿತ್ತು.

ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2020-21ರ ಜನವರಿ-ಮಾರ್ಚ್ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ(GDP) 2.5 ರಷ್ಟು ವಿಸ್ತರಿಸಿದೆ. ಭಾರತದ Q4 GDP ಜನವರಿ-ಮಾರ್ಚ್ ಬೆಳವಣಿಗೆಯು ಶೇ. 4.1 ರ ಅಂದಾಜುಗಳನ್ನು ಮೀರಿದೆ. FY 22 ಆರ್ಥಿಕ ಬೆಳವಣಿಗೆಯ ಅಂದಾಜು ಶೇ. 8.7 ಕ್ಕೆ ಜಿಗಿದಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...