ನವದೆಹಲಿ: ಜನ್ ಧನ್ ಖಾತೆ ಹೊಂದಿದ ಮಹಿಳೆಯರಿಗೆ ಮೇ 4ರಿಂದ ಎರಡನೇ ಕಂತಿನ ಹಣ ಜಮೆ ಮಾಡಲಾಗುವುದು.
ದೇಶಾದ್ಯಂತ ಜನ್ ಧನ್ ಖಾತೆ ಹೊಂದಿದ ಮಹಿಳೆಯರ ಪ್ರತಿ ಖಾತೆಗೆ 500 ರೂಪಾಯಿಯನ್ನು ಜಮೆ ಮಾಡಲಾಗುವುದು. ಕೊರೋನಾ ಸೋಂಕು ತಡೆಯಲು ಲಾಕ್ಡೌನ್ ಜಾರಿ ಮಾಡಿರುವುದರಿಂದ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು ಸರ್ಕಾರ ಕ್ರಮಕೈಗೊಂಡಿದೆ.
ಮೇ 4 ರಿಂದ 500 ರೂಪಾಯಿ 2ನೇ ಕಂತಿನ ಹಣವನ್ನು ಜನ್ ಧನ್ ಖಾತೆ ಹೊಂದಿದ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿದೇಬಶೀಷ್ ಪಾಂಡಾ ಹೇಳಿದ್ದಾರೆ.
ಮೇ 4ರಂದು ಖಾತೆಯಲ್ಲಿ ಕೊನೆಯ ಸಂಖ್ಯೆ 0 ಅಥವಾ 1 ಇದ್ದವರಿಗೆ, ಮೇ 5 ರಂದು ಖಾತೆಯ ಕೊನೆಯ ಸಂಖ್ಯೆ 2 ಅಥವಾ 3 ಇದ್ದವರಿಗೆ, ಮೇ 6 ರಂದು ಖಾತೆಯ ಕೊನೆಯ ಸಂಖ್ಯೆ 4 ಅಥವಾ 5 ಇದ್ದವರಿಗೆ, ಮೇ 8 ರಂದು ಖಾತೆಯ ಕೊನೆಯ ಸಂಖ್ಯೆ 6 ಅಥವಾ 7 ಇದ್ದವರಿಗೆ, ಮೇ 11 ರಂದು ಖಾತೆಯ ಕೊನೆಯ ಸಂಖ್ಯೆ 8 ಅಥವಾ 9 ಇದ್ದವರಿಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ.