alex Certify ಬಿಗ್ ನ್ಯೂಸ್: PUBG ಮರು ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರದಿಂದ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: PUBG ಮರು ಆರಂಭದ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರ ಸರ್ಕಾರದಿಂದ ಶಾಕ್

ಚೀನಿ ಆಪ್​​ ಬಳಕೆದಾರರ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಕೇಂದ್ರ ಸರ್ಕಾರ ಭಾರತದಲ್ಲಿ ಚೀನಾ ಮೂಲದ ಅನೇಕ ಆಪ್​​ಗಳನ್ನ ಬ್ಯಾನ್​ ಮಾಡಿತ್ತು. ಈ ಸಾಲಿನಲ್ಲಿ ಅತ್ಯಂತ ಜನಪ್ರಿಯ ಗೇಮಿಂಗ್​ ಅಪ್ಲಿಕೇಶನ್​ ಪಬ್​​ ಜಿ ಕೂಡ ಸೇರಿತ್ತು. ಆದರೆ ಭಾರತದಲ್ಲಿ ಪಬ್​ ಜಿ ಮತ್ತೊಮ್ಮೆ ಲಾಂಚ್​ ಆಗಲಿದೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಈ ಎಲ್ಲ ವದಂತಿಗಳಿಗೆ ಇದೀಗ ಸ್ವತಃ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ಪಬ್​ ಜಿ ರೀ ಲಾಂಚ್​ ಊಹಾಪೋಹಗಳ ವಿಚಾರವಾಗಿ ಮೌನ ಮುರಿದಿರುವ ಕೇಂದ್ರ ಸರ್ಕಾರ ಈ ಗೇಮಿಂಗ್​ ಅಪ್ಲಿಕೇಷನ್​ ಮರುಪ್ರಾರಂಭಕ್ಕೆ ಇಲ್ಲಿಯವರೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಹೇಳಿದೆ.

ಪಬ್​ಜಿ ಮರು ಪ್ರಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ 2 ಆರ್​ಟಿಐ ಅರ್ಜಿಗಳಿಗೆ ಉತ್ತರ ನೀಡಿದ ಕೇಂದ್ರ ಸರ್ಕಾರ, ಗೂಗಲ್​ ಇಲ್ಲವೇ ಯಾವುದೇ ವೆಬ್​ಸೈಟ್​ಗಳ ಮುಖಾಂತರ ಈ ಅಪ್ಲಿಕೇಶನ್​ ಬಳಕೆಗೆ ಭಾರತದಲ್ಲಿ ಯಾವುದೇ ಅನುಮತಿಯನ್ನ ನೀಡಲಾಗಿಲ್ಲ ಎಂದು ಹೇಳಿದೆ.

ಆದರೆ ಈ ವಿಚಾರ ಕೇಳಿದ ಭಾರತೀಯ ಪಬ್​ ಜಿ ಅಭಿಮಾನಿಗಳಿಗೆ ನಿರಾಸೆಯಾಗಿರೋದಂತೂ ಸತ್ಯ. ಆದರೆ ಭಾರತದಲ್ಲೇ ಪಬ್​ ಜಿ ಮಾದರಿಯ FAU-G ಗೇಮಿಂಗ್​ ಅಪ್ಲಿಕೇಶನ್​ ಅಭಿವೃದ್ಧಿಯಾಗುತ್ತಿದ್ದು ಇನ್ನು ಕೆಲವೇ ಸಮಯದಲ್ಲಿ ಮಾರುಕಟ್ಟೆಗೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...