alex Certify ವಾಟ್ಸಾಪ್​​​ ಹೊಸ ಸೇವಾ ನಿಯಮ ಒಪ್ಪಿಗೆ ಇಲ್ಲದಿದ್ದರೆ ಬೇರೆ ಅಪ್ಲಿಕೇಶನ್​ ಬಳಸಿ ಎಂದ ನ್ಯಾಯಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್​​​ ಹೊಸ ಸೇವಾ ನಿಯಮ ಒಪ್ಪಿಗೆ ಇಲ್ಲದಿದ್ದರೆ ಬೇರೆ ಅಪ್ಲಿಕೇಶನ್​ ಬಳಸಿ ಎಂದ ನ್ಯಾಯಾಲಯ

ವಾಟ್ಸಾಪ್​ನ ಹೊಸ ಸೇವಾ ನಿಯಮವನ್ನ ಒಪ್ಪಿಕೊಳ್ಳೋದು ಬಿಡೋದು ಬಳಕೆದಾರರ ವಿವೇಚನೆಗೆ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ವಾಟ್ಸಾಪ್​ ಅನ್ನೋದು ಒಂದು ಖಾಸಗಿ ಅಪ್ಲಿಕೇಶನ್​. ಇದರ ಹೊಸ ಸೇವಾ ನಿಯಮ ಒಪ್ಪಿಕೊಳ್ಳೋದು ನಿಮ್ಮ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ಸೇವಾ ನಿಯಮದ ಬಗ್ಗೆ ನಿಮಗೆ ಗೊಂದಲವಿದ್ದರೆ ನೀವು ಬೇರೆ ಮೆಸೆಜಿಂಗ್​ ಅಪ್ಲಿಕೇಶನ್​ಗಳನ್ನ ಆಯ್ಕೆ ಮಾಡಿಕೊಳ್ಳಿ ಎಂದು ನ್ಯಾಯಮೂರ್ತಿ ಸಂಜೀವ್​ ಸಚ್​ದೇವಾ ಹೇಳಿದ್ದಾರೆ.

ವಾಟ್ಸಾಪ್​ನ ಹೊಸ ಸೇವಾ ನಿಯಮಗಳನ್ನ ಪ್ರಶ್ನಿಸಿ ವಕೀಲರೊಬ್ಬರು ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ ಪರೋಕ್ಷವಾಗಿ ಈ ವಿಚಾರದಲ್ಲಿ ತಾನು ಮೂಗು ತೂರಿಸೋದಿಲ್ಲ ಎಂದು ಹೇಳಿದೆ. ಅಲ್ಲದೇ ವಾಟ್ಸಾಪ್​ ಮಾತ್ರವಲ್ಲದೇ ನೀವು ಬಳಕೆ ಮಾಡುವ ಅದೆಷ್ಟೋ ಅಪ್ಲಿಕೇಶನ್​​ಗಳ ಮೂಲಕ ನೀವು ಈಗಾಗಲೇ ನಿಮ್ಮ ಖಾಸಗಿ ಮಾಹಿತಿಯನ್ನ ನೀಡಲು ಅವಕಾಶ ನೀಡಿದ್ದೀರಿ ಎಂದೂ ಕೋರ್ಟ್ ಹೇಳಿದೆ.

ಗೂಗಲ್​ ಮ್ಯಾಪ್​ ಕೂಡ ಬಳಕೆದಾರರ ಎಲ್ಲಾ ಮಾಹಿತಿಗಳನ್ನ ಸಂಗ್ರಹಿಸಿಡುತ್ತದೆ ಎಂದೂ ದೆಹಲಿ ಹೈಕೋರ್ಟ್ ಮಾಹಿತಿ ನೀಡಿದೆ. ಹೊಸ ನಿಯಮದ ಪ್ರಕಾರ ಖಾಸಗಿ ಮೆಸೇಜ್​ಗಳನ್ನ ವಾಟ್ಸಾಪ್​​ ನೋಡುವುದಿಲ್ಲ ಎಂದು ವಾಟ್ಸಾಪ್​, ಫೇಸ್​ಬುಕ್​ ಪರ ವಕೀಲರಾದ ಕಪಿಲ್​ ಸಿಬಲ್​ ಹಾಗೂ ಮುಕುಲ್​ ರೋಹ್ಟಗಿ ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...