ವಾಟ್ಸಾಪ್ ಬಳಕೆ ಮಾಡುವ ಪ್ರತಿ ಯುವಜನತೆಗೆ ಒಂದು ಸಮಸ್ಯೆ ಕಾಡಿದ್ದಿದೆ. ಫ್ಯಾಮಿಲಿ ಗ್ರೂಪ್, ಆಫೀಸ್ ಗ್ರೂಪ್ ಹೀಗೆ ಇಂತಹ ಹಲವಾರು ಗ್ರೂಪ್ಗಳಲ್ಲಿ ಬರುವ ಅನಗತ್ಯ ಮೆಸೇಜ್ಗಳು ತುಂಬಾನೇ ಕಿರಿಕಿರಿ ನೀಡುತ್ತೆ. ಮೆಸೇಜ್ ಸಂದೇಶ ಬಂದೊಡನೆಯೇ ಮೊಬೈಲ್ ನೋಡಿರ್ತಿರಿ. ಆದರೆ ಅದು ಯಾವುದೋ ಉಪಯೋಗವಿಲ್ಲದ ಒಂದು ಗ್ರೂಪ್ ಮೆಸೇಜ್ ಆಗಿರುತ್ತೆ.
ಈ ಕಾಟದಿಂದ ತಪ್ಪಿಸಿಕೊಳ್ಳೋಕೆ ವಾಟ್ಸಾಪ್ ಈ ಹಿಂದೆಯೇ ಮ್ಯೂಟ್ ಆಪ್ಶನ್ ನೀಡಿತ್ತು. ಇದರ ಸಹಾಯದಿಂದ ನೀವು ಒಂದು ವರ್ಷಗಳ ಕಾಲ ಚಾಟ್ಗಳನ್ನ ಮ್ಯೂಟ್ ಮಾಡಬಹುದಿತ್ತು. ಆದರೆ ಇದೀಗ ಈ ಆಪ್ಶನ್ನ್ನ ಅಭಿವೃದ್ಧಿ ಮಾಡಿರುವ ವಾಟ್ಸಾಪ್ ಸಂಸ್ಥೆ ಮ್ಯೂಟ್ ಆಪ್ಶನ್ ಅವಧಿಯನ್ನ ತೆಗೆದು ಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಾಟ್ಸಾಪ್ ಸಂಸ್ಥೆ ನೀವು ಇನ್ಮುಂದೆ ಚಾಟ್ಗಳನ್ನ ಎಷ್ಟು ದಿನ ಬೇಕಿದ್ರೂ ಮ್ಯೂಟ್ ಮಾಡಬಹುದು ಅಂತಾ ಬರೆದುಕೊಂಡಿದೆ. ವಾಟ್ಸಾಪ್ನ ಈ ಫೀಚರ್ನಿಂದಾಗಿ ಬಳಕೆದಾರರು ಫುಲ್ ಖುಶ್ ಆಗಿದ್ದಾರೆ.