ನವದೆಹಲಿ: ಐಟಿ ವಲಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.75 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಐಟಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ದೇಶದಲ್ಲಿನ ಉದ್ಯಮಗಳಿಂದ ತಂತ್ರಜ್ಞಾನದ ಅಳವಡಿಕೆ ಐಟಿ ಬಿಪಿಎಂ ಉದ್ಯಮದಲ್ಲಿ ನೇಮಕಾತಿ ಸಕಾರಾತ್ಮಕವಾಗಿ ಮುಂದುವರೆದಿದೆ.
2021 -22 ನೇ ಸಾಲಿನಲ್ಲಿ 48.5 ಲಕ್ಷ ಉದ್ಯೋಗ ತಲುಪುವ ನಿಟ್ಟಿನಲ್ಲಿ ಹೊಸದಾಗಿ 3.75 ಲಕ್ಷ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ಭಾರತ ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಪ್ರಕ್ರಿಯೆ ನಿರ್ವಹಣೆ ಮಾರ್ಚ್ 2022ರ ವೇಳೆಗೆ 44.7 ಲಕ್ಷದಿಂದ 48.5 ಲಕ್ಷಕ್ಕೆ ಬೆಳೆಯಲಿದೆ ಎಂದು ಟೀಮ್‌ಲೀಸ್ ಡಿಜಿಟಲ್ ಎಂಪ್ಲಾಯ್‌ಮೆಂಟ್ ತಿಳಿಸಿದೆ. ಇದು ಗುತ್ತಿಗೆ ಸಿಬ್ಬಂದಿ ಮುಖ್ಯಸ್ಥರು, ವಿಷಯ ತಜ್ಞರನ್ನು ಒಳಗೊಂಡಿರುವ 100 ಕ್ಕೂ ಹೆಚ್ಚು ಉದ್ಯೋಗದಾತರು ಮತ್ತು ನಾಯಕರನ್ನು ಸಮೀಕ್ಷೆ ಮಾಡಿ, ಸಂದರ್ಶಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.