alex Certify 90 ಸಾವಿರ ರೂಪಾಯಿವರೆಗೆ ಸಂಬಳವಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ಸಾವಿರ ರೂಪಾಯಿವರೆಗೆ ಸಂಬಳವಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಕ್ರಮ್​ ಸಾರಾಭಾಯ್​ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ಇಂಜಿನಿಯರ್​​ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಬಾಹ್ಯಾಕಾಶ ಏಜೆನ್ಸಿಯ ಆನ್​ಲೈನ್​ ಅಪ್ಲಿಕೇಶನ್​ ಪೋರ್ಟಲ್​​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇಸ್ರೋದಲ್ಲಿರುವ 61 ಖಾಲಿ ಹುದ್ದೆಗಳಲ್ಲಿ 19 ವಿಜ್ಞಾನಿಗಳು ಅಥವಾ ಇಂಜಿನಿಯರ್​​ ಎಸ್​ಡಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಭೌತಶಾಸ್ತ್ರ, ಏರೋಸ್ಪೇಸ್​, ವಾಯುಮಂಡಲ ವಿಜ್ಞಾನ, ಹವಾಮಾನ, ಬಾಹ್ಯಾಕಾಶ ವಿಜ್ಞಾನ ಅಥವಾ ಡೈನಾಮಿಕ್ಸ್ ಮಾಡೆಲಿಂಗ್​, ಏರೋಸ್ಪೇಸ್​ ವಾಹನಗಳ ನಿಯಂತ್ರಣ ಸೇರಿದಂತೆ ಇತರೆ ವಿಭಾಗಗಳಲ್ಲಿ ಪಿಹೆಚ್​ಡಿ ಪಡೆಯುವ ಅವಶ್ಯಕತೆ ಇದೆ.

ಇನ್ನುಳಿದ 42 ಹುದ್ದೆಗಳು ಎಂಇ ಅಥವಾ ಎಂಟೆಕ್​ ಅರ್ಹತೆ ಹೊಂದಿರುವ ವಿಜ್ಞಾನಿ ಅಥವಾ ಇಂಜಿನಿಯರ್​ ಎಸ್​ಸಿಯಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೈಗಾರಿಕೆ ಇಂಜಿನಿಯರಿಂಗ್, ನಿಯಂತ್ರಣ ವ್ಯವಸ್ಥೆಗಳ ಇಂಜಿನಿಯರಿಂಗ್​, ನಿಯಂತ್ರಣ ಹಾಗೂ ಸಾಧನ, ಏರೋಸ್ಪೇಸ್​ ಇಂಜಿನಿಯರಿಂಗ್​ ಅಥವಾ ಏರೋನಾಟಿಕಲ್​ ಇಂಜಿನಿಯರಿಂಗ್​ ಪದವಿ ಹೊಂದಿರಬೇಕಿದೆ.

ವಿಜ್ಞಾನಿ ಅಥವಾ ಇಂಜಿನಿಯರ್​ ಎಸ್​ಡಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 90 ಸಾವಿರವರೆಗೆ ರೂಪಾಯಿ ಸಂಬಳ ಪಡೆಯಲಿದ್ದಾರೆ. ಇನ್ನು ವಿಜ್ಞಾನಿ ಅಥವಾ ಇಂಜಿನಿಯರ್ ಎಸ್​ಸಿ ಹುದ್ದೆಗೆ ಆಯ್ಕೆಯಾದವರು ಪ್ರತಿ ತಿಂಗಳು 74600 ರೂಪಾಯಿ ಸಂಬಳ ಪಡೆಯಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...