ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಹಾಗೂ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಬಾಹ್ಯಾಕಾಶ ಏಜೆನ್ಸಿಯ ಆನ್ಲೈನ್ ಅಪ್ಲಿಕೇಶನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇಸ್ರೋದಲ್ಲಿರುವ 61 ಖಾಲಿ ಹುದ್ದೆಗಳಲ್ಲಿ 19 ವಿಜ್ಞಾನಿಗಳು ಅಥವಾ ಇಂಜಿನಿಯರ್ ಎಸ್ಡಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಭೌತಶಾಸ್ತ್ರ, ಏರೋಸ್ಪೇಸ್, ವಾಯುಮಂಡಲ ವಿಜ್ಞಾನ, ಹವಾಮಾನ, ಬಾಹ್ಯಾಕಾಶ ವಿಜ್ಞಾನ ಅಥವಾ ಡೈನಾಮಿಕ್ಸ್ ಮಾಡೆಲಿಂಗ್, ಏರೋಸ್ಪೇಸ್ ವಾಹನಗಳ ನಿಯಂತ್ರಣ ಸೇರಿದಂತೆ ಇತರೆ ವಿಭಾಗಗಳಲ್ಲಿ ಪಿಹೆಚ್ಡಿ ಪಡೆಯುವ ಅವಶ್ಯಕತೆ ಇದೆ.
ಇನ್ನುಳಿದ 42 ಹುದ್ದೆಗಳು ಎಂಇ ಅಥವಾ ಎಂಟೆಕ್ ಅರ್ಹತೆ ಹೊಂದಿರುವ ವಿಜ್ಞಾನಿ ಅಥವಾ ಇಂಜಿನಿಯರ್ ಎಸ್ಸಿಯಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೈಗಾರಿಕೆ ಇಂಜಿನಿಯರಿಂಗ್, ನಿಯಂತ್ರಣ ವ್ಯವಸ್ಥೆಗಳ ಇಂಜಿನಿಯರಿಂಗ್, ನಿಯಂತ್ರಣ ಹಾಗೂ ಸಾಧನ, ಏರೋಸ್ಪೇಸ್ ಇಂಜಿನಿಯರಿಂಗ್ ಅಥವಾ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹೊಂದಿರಬೇಕಿದೆ.
ವಿಜ್ಞಾನಿ ಅಥವಾ ಇಂಜಿನಿಯರ್ ಎಸ್ಡಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 90 ಸಾವಿರವರೆಗೆ ರೂಪಾಯಿ ಸಂಬಳ ಪಡೆಯಲಿದ್ದಾರೆ. ಇನ್ನು ವಿಜ್ಞಾನಿ ಅಥವಾ ಇಂಜಿನಿಯರ್ ಎಸ್ಸಿ ಹುದ್ದೆಗೆ ಆಯ್ಕೆಯಾದವರು ಪ್ರತಿ ತಿಂಗಳು 74600 ರೂಪಾಯಿ ಸಂಬಳ ಪಡೆಯಲಿದ್ದಾರೆ.