alex Certify ಗೂಗಲ್​ ಮ್ಯಾಪ್​ಗೆ ಠಕ್ಕರ್​ ನೀಡಲು ಬಂತು ಸ್ವದೇಶಿ ನಿರ್ಮಿತ ʼಭುವನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೂಗಲ್​ ಮ್ಯಾಪ್​ಗೆ ಠಕ್ಕರ್​ ನೀಡಲು ಬಂತು ಸ್ವದೇಶಿ ನಿರ್ಮಿತ ʼಭುವನ್ʼ

ಗೊತ್ತಿಲ್ಲದ ವಿಳಾಸವನ್ನ ಹುಡುಕಬೇಕು ಅಂದರೆ ಗೂಗಲ್​ ಮ್ಯಾಪ್ ಮೊರೆ ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದೀಗ ಗೂಗಲ್​ ಮ್ಯಾಪ್​ಗೆ ಠಕ್ಕರ್​ ಕೋಡೋಕೆ ಇಸ್ರೋ ಸಜ್ಜಾಗಿದ್ದು ಡಿಜಿಟಲ್​ ಮ್ಯಾಪಿಂಗ್ & ನೇವಿಗೇಷನ್​​ ಟೆಕ್ನಾಲಜಿ ಸೊಲ್ಯುಷನ್​ ಪ್ರೊವೈಡರ್​ ಆಗಿರುವ ಮ್ಯಾಪ್ ಮೈ ಇಂಡಿಯಾ ಶುಕ್ರವಾರ ಮ್ಯಾಪಿಂಗ್​ ಪೋರ್ಟಲ್​ ಒಂದನ್ನ ಲಾಂಚ್ ಮಾಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಮ್ಯಾಪ್​​ ಮೈ ಇಂಡಿಯಾದ ಸಿಇಓ ಹಾಗೂ ಎಕ್ಸಿಕ್ಯುಟಿವ್​ ಎಡಿಟರ್​ ರೋಹನ್ ವರ್ಮಾ, ಇಸ್ರೋ ಸಂಸ್ಥೆ ಜೊತೆ ನಿರ್ಮಿಸಿರುವ ಭುವನ್​ ಅಪ್ಲಿಕೇಶನ್​​ ಆತ್ಮನಿರ್ಭರ್ ಭಾರತದ ಕಡೆಗೆ ಒಂದು ಮೈಲಿಗಲ್ಲಾಗಿದೆ. ಭಾರತೀಯ ಬಳಕೆದಾರರು ಇನ್ಮುಂದೆ ನ್ಯಾವಿಗೇಷನ್​ಗಾಗಿ ವಿದೇಶಿ ಅಪ್ಲಿಕೇಶನ್​ಗಳ ಮೊರೆ ಹೋಗಬೇಕಿಲ್ಲ. ಬದಲಾಗಿ ಅವರು ಸ್ವದೇಶಿ ಅಪ್ಲಿಕೇಶನ್​ಗಳನ್ನೇ ಬಳಕೆ ಮಾಡಬಹುದಾಗಿದೆ ಎಂದು ಹೇಳಿದ್ರು.

ಮ್ಯಾಪ್​ ಮೈ ಇಂಡಿಯಾದಲ್ಲಿ ಲಭ್ಯವಿರುವ ಅಪ್ಲಿಕೇಶನ್​ ಪ್ರೋಗಾಮಿಂಗ್​ ಇಂಟರ್​ಫೇಸ್​​ನಲ್ಲಿ ಭುವನ್​, ವೇದಾಸ್​ ಹಾಗೂ ಮೋಸ್ಡಾಕ್​​ಗಳನ್ನ ಬಳಸಿಕೊಂಡು ಸಮಗ್ರ ಭೂ ಪ್ರದೇಶದ ಮಾಹಿತಿ ನೀಡಲಾಗುವುದು ಎಂದು ಇಸ್ರೋ ಹೇಳಿಕೆ ನೀಡಿದೆ.

ಇಸ್ರೋ ಪಾಲುದಾರಿಕೆ ಹೊಂದಿರುವ ಮ್ಯಾಪ್​ ಮೈ ಇಂಡಿಯಾದಲ್ಲಿ ಭಾರತದ ಪ್ರತಿಯೊಂದು ಪ್ರದೇಶವನ್ನೂ ಸುಲಭವಾಗಿ ಹುಡುಕಬಹುದಾಗಿದೆ . ಕೇವಲ ಭೂ ಪ್ರದೇಶದ ಮಾಹಿತಿ ಮಾತ್ರವಲ್ಲದೇ ಹವಾಮಾನ, ಪ್ರವಾಹ, ಭೂ ಕುಸಿತದ ಬಗ್ಗೆಯೂ ಮ್ಯಾಪ್​ ಮೈ ಇಂಡಿಯಾ ಮಾಹಿತಿಯನ್ನ ಒದಗಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...