ಗೊತ್ತಿಲ್ಲದ ವಿಳಾಸವನ್ನ ಹುಡುಕಬೇಕು ಅಂದರೆ ಗೂಗಲ್ ಮ್ಯಾಪ್ ಮೊರೆ ಹೋಗೋದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇದೀಗ ಗೂಗಲ್ ಮ್ಯಾಪ್ಗೆ ಠಕ್ಕರ್ ಕೋಡೋಕೆ ಇಸ್ರೋ ಸಜ್ಜಾಗಿದ್ದು ಡಿಜಿಟಲ್ ಮ್ಯಾಪಿಂಗ್ & ನೇವಿಗೇಷನ್ ಟೆಕ್ನಾಲಜಿ ಸೊಲ್ಯುಷನ್ ಪ್ರೊವೈಡರ್ ಆಗಿರುವ ಮ್ಯಾಪ್ ಮೈ ಇಂಡಿಯಾ ಶುಕ್ರವಾರ ಮ್ಯಾಪಿಂಗ್ ಪೋರ್ಟಲ್ ಒಂದನ್ನ ಲಾಂಚ್ ಮಾಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿರುವ ಮ್ಯಾಪ್ ಮೈ ಇಂಡಿಯಾದ ಸಿಇಓ ಹಾಗೂ ಎಕ್ಸಿಕ್ಯುಟಿವ್ ಎಡಿಟರ್ ರೋಹನ್ ವರ್ಮಾ, ಇಸ್ರೋ ಸಂಸ್ಥೆ ಜೊತೆ ನಿರ್ಮಿಸಿರುವ ಭುವನ್ ಅಪ್ಲಿಕೇಶನ್ ಆತ್ಮನಿರ್ಭರ್ ಭಾರತದ ಕಡೆಗೆ ಒಂದು ಮೈಲಿಗಲ್ಲಾಗಿದೆ. ಭಾರತೀಯ ಬಳಕೆದಾರರು ಇನ್ಮುಂದೆ ನ್ಯಾವಿಗೇಷನ್ಗಾಗಿ ವಿದೇಶಿ ಅಪ್ಲಿಕೇಶನ್ಗಳ ಮೊರೆ ಹೋಗಬೇಕಿಲ್ಲ. ಬದಲಾಗಿ ಅವರು ಸ್ವದೇಶಿ ಅಪ್ಲಿಕೇಶನ್ಗಳನ್ನೇ ಬಳಕೆ ಮಾಡಬಹುದಾಗಿದೆ ಎಂದು ಹೇಳಿದ್ರು.
ಮ್ಯಾಪ್ ಮೈ ಇಂಡಿಯಾದಲ್ಲಿ ಲಭ್ಯವಿರುವ ಅಪ್ಲಿಕೇಶನ್ ಪ್ರೋಗಾಮಿಂಗ್ ಇಂಟರ್ಫೇಸ್ನಲ್ಲಿ ಭುವನ್, ವೇದಾಸ್ ಹಾಗೂ ಮೋಸ್ಡಾಕ್ಗಳನ್ನ ಬಳಸಿಕೊಂಡು ಸಮಗ್ರ ಭೂ ಪ್ರದೇಶದ ಮಾಹಿತಿ ನೀಡಲಾಗುವುದು ಎಂದು ಇಸ್ರೋ ಹೇಳಿಕೆ ನೀಡಿದೆ.
ಇಸ್ರೋ ಪಾಲುದಾರಿಕೆ ಹೊಂದಿರುವ ಮ್ಯಾಪ್ ಮೈ ಇಂಡಿಯಾದಲ್ಲಿ ಭಾರತದ ಪ್ರತಿಯೊಂದು ಪ್ರದೇಶವನ್ನೂ ಸುಲಭವಾಗಿ ಹುಡುಕಬಹುದಾಗಿದೆ . ಕೇವಲ ಭೂ ಪ್ರದೇಶದ ಮಾಹಿತಿ ಮಾತ್ರವಲ್ಲದೇ ಹವಾಮಾನ, ಪ್ರವಾಹ, ಭೂ ಕುಸಿತದ ಬಗ್ಗೆಯೂ ಮ್ಯಾಪ್ ಮೈ ಇಂಡಿಯಾ ಮಾಹಿತಿಯನ್ನ ಒದಗಿಸಲಿದೆ.