ಈ ಫೇಸ್ಬುಕ್ ಎಲ್ಲಾ ಬರುವ ಮುನ್ನ ಸಾಮಾಜಿಕ ಜಾಲತಾಣಗಳ ಕಲ್ಪನೆ ಇನ್ನೂ ಆಗಷ್ಟೇ ಅಲ್ಲಲ್ಲಿ ಕೇಳಿ ಬರುತ್ತಿತ್ತು. ಆ ದಿನಗಳಲ್ಲಿ ಇಂಟರ್ನೆಟ್ ಬ್ರೌಸ್ ಮಾಡಲು ನಗರಗಳಲ್ಲಿರುವ ಹುಡುಗರು ಸೈಬರ್ ಕೆಫೆಗಳಿಗೆ ಎಡತಾಕುತ್ತಿದ್ದರು.
ಆ ಸಮಯದಲ್ಲಿ ಆರ್ಕುಟ್ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು, ಸಂದೇಶಗಳನ್ನು ಶೇರ್ ಮಾಡಿಕೊಳ್ಳುವ ಅಭ್ಯಾಸ ರೂಢಿಯಲ್ಲಿ ಇತ್ತು. ಆದರೆ ಮುಂದಿನ ದಿನಗಳಲ್ಲಿ ಫೇಸ್ಬುಕ್ ಹಾಗೂ ಟ್ವಿಟರ್‌ಗಳು ಬಂದ ಬಳಿಕ ಆರ್ಕುಟ್ ಹಾಗೂ Hi5ಗಳನ್ನು ಜನ ಮರೆತೇಬಿಟ್ಟರು.
ಈ ಕಾರಣದಿಂದ ಜುಲೈ 5, 2014ರಲ್ಲಿ ತನ್ನ ಬಳಕೆದಾರರಿಗೆ ಅಂತಿಮವಾಗಿ ಒಂದೊಂದು ಫೇರ್‌ವೆಲ್ ಸಂದೇಶಗಳನ್ನು ಆರ್ಕುಟ್ ಕಳುಹಿಸಿ, ತಾನು ಬದಿಗೆ ಸರಿಯುವುದಾಗಿ ಹೇಳಿತ್ತು. ಇದೀಗ ಆರ್ಕುಟ್ ನೆನಪಿನಲ್ಲಿ ಟ್ವಿಟ್ಟಿಗರು ತಮ್ಮ ಇನ್‌ಬಾಕ್ಸ್‌ಗಳಿಗೆ ಬಂದಿದ್ದ ಆ ಫೇರ್‌ವೆಲ್ ಸಂದೇಶವನ್ನು ಶೇರ್ ಮಾಡಿಕೊಂಡು ಆರ್ಕುಟ್‌ನಲ್ಲಿ ತಾವು ಕಳೆದ ಮೆಚ್ಚಿನ ಕ್ಷಣಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
https://twitter.com/rishabh_memes/status/1279427931526230017?ref_src=twsrc%5Etfw%7Ctwcamp%5Etweetembed%7Ctwterm%5E1279427931526230017%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fiska-craze-hi-alag-tha-orkuts-farewell-mail-goes-viral-netizens-remember-bachpan-ke-din-with-memes%2F616679
https://twitter.com/UtsavS8/status/1279381676628426753?ref_src=twsrc%5Etfw%7Ctwcamp%5Etweetembed%7Ctwterm%5E1279381676628426753%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fiska-craze-hi-alag-tha-orkuts-farewell-mail-goes-viral-netizens-remember-bachpan-ke-din-with-memes%2F616679