ಏಪ್ರಿಲ್ ಒಂದರಿಂದ ದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿದೆ. ವಿಮಾ ನಿಯಂತ್ರಕ ಐಆರ್ಡಿಎಐ ಏಪ್ರಿಲ್ 1ರಿಂದ ಸರಳ ಪಿಂಚಣಿ ಯೋಜನೆ ಜಾರಿಗೆ ತರಲು ವಿಮಾ ಕಂಪನಿಗಳಿಗೆ ಸೂಚನೆ ನೀಡಿದೆ. ವಿಮಾ ಕಂಪನಿಗಳು ಏಪ್ರಿಲ್ 1 ರಿಂದ ಸರಳ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಿವೆ. ಸರಳ ಪಿಂಚಣಿ ಯೋಜನೆಯಡಿ, ವಿಮಾದಾರರ ಹೆಸರಿನಲ್ಲಿ ಕೇವಲ ಎರಡು ವರ್ಷಾಶನ ಆಯ್ಕೆ ಇರುತ್ತದೆ.
ಸ್ವಯಂ ಉದ್ಯೋಗ ಶುರು ಮಾಡಲು ನೆರವಾಗುತ್ತೆ ಮೋದಿ ಸರ್ಕಾರದ ಈ ಯೋಜನೆ
ಐಆರ್‌ಡಿಎಐನ ಮಾರ್ಗಸೂಚಿಗಳ ಪ್ರಕಾರ, ಸರಳ ಪಿಂಚಣಿ ಯೋಜನೆಯಲ್ಲಿ ಕನಿಷ್ಠ ವರ್ಷಾಶನ ಮೊತ್ತವು ತಿಂಗಳಿಗೆ 1 ಸಾವಿರ ರೂಪಾಯಿ. ತ್ರೈಮಾಸಿಕಕ್ಕೆ 3 ಸಾವಿರ ರೂಪಾಯಿ. ಅರ್ಧ ವರ್ಷಕ್ಕೆ 6 ಸಾವಿರ ರೂಪಾಯಿ ಹಾಗೂ ವಾರ್ಷಿಕವಾಗಿ 12 ಸಾವಿರ ರೂಪಾಯಿ. ಐಆರ್‌ಡಿಎಐನ ಈ ಕ್ರಮ ಗ್ರಾಹಕರಿಗೆ ಯೋಜನೆಯನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಐಆರ್‌ಡಿಎಐ ಮಾರ್ಗಸೂಚಿಗಳ ಪ್ರಕಾರ, ಪಾಲಿಸಿಯನ್ನು ಪ್ರಾರಂಭಿಸಿದ ದಿನಾಂಕದಿಂದ 6 ತಿಂಗಳ ನಂತರ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಹಿಂಪಡೆಯಬಹುದು.
GOOD NEWS: ಚೇತರಿಕೆಯತ್ತ ಭಾರತದ ಆರ್ಥಿಕತೆ
ಐಆರ್ಡಿಎಐ ಪ್ರಕಾರ, ಸರಳ ಪಿಂಚಣಿ ಯೋಜನೆಯಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡಿದರೆ, ನಿಮಗೆ ಹೆಚ್ಚಿನ ಹಣ ಸಿಗುತ್ತದೆ. ಇದಲ್ಲದೆ, ವರ್ಷಾಶನದ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಜೀವನದುದ್ದಕ್ಕೂ ವರ್ಷಾಶನದ ಪ್ರಯೋಜನವನ್ನು ಪಡೆಯಬಹುದು. ಮರಣದ ನಂತರ ಸಂಗಾತಿಯು ವರ್ಷಾಶನ ಪಡೆಯುತ್ತಾರೆ. ಸಂಗಾತಿ ಮರಣದ ನಂತ್ರ ಉತ್ತರಾಧಿಕಾರಿಗೆ ಶೇಕಡಾ 10ರಷ್ಟು ಹಣ ಸಿಗಲಿದೆ.