alex Certify IRCTC ಶುರು ಮಾಡಿದೆ ವರ್ಕ್ ಫ್ರಂ ಹೊಟೇಲ್ ಪ್ಯಾಕೇಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IRCTC ಶುರು ಮಾಡಿದೆ ವರ್ಕ್ ಫ್ರಂ ಹೊಟೇಲ್ ಪ್ಯಾಕೇಜ್

IRCTC introduces work from hotel package from kerala | IRCTC लेकर आया 'work  from hotel' package' पैकेज, खूबसूरत वादियों में करिए ऑफिस का काम | Hindi  News, बिजनेस

ಕೊರೊನಾ ಹಿನ್ನಲೆಯಲ್ಲಿ ದೇಶದ ಪರಿಸ್ಥಿತಿ ಬಿಗಡಾಯಿಸಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಒಂದೇ ಪರಿಸರದಲ್ಲಿ ಕುಳಿತು ಕೆಲಸ ಮಾಡಿ ಬೇಸರಗೊಂಡಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಐಆರ್‌ಸಿಟಿಸಿ ಒಂದು ಆಫರ್ ನೀಡ್ತಿದೆ.

ವರ್ಕ್ ಫ್ರಮ್ ಹೋಮ್ ಮಾದರಿಯಲ್ಲಿ ಐಆರ್‌ಸಿಟಿಸಿ ವರ್ಕ್ ಫ್ರಮ್ ಹೋಟೆಲ್ ಪ್ಯಾಕೇಜ್ ಪ್ರಾರಂಭಿಸಿದೆ. ಹೋಟೆಲ್ ರೂಮಿನಲ್ಲಿ ಕುಳಿತು ಐಷಾರಾಮಿ ವಾತಾವರಣದಲ್ಲಿ ಕಚೇರಿ ಕೆಲಸವನ್ನು ಮಾಡಬಹುದು. ಪ್ರಸ್ತುತ ಐಆರ್‌ಸಿಟಿಸಿಯ ಈ ಪ್ಯಾಕೇಜ್ ಕೇರಳದ ಹೋಟೆಲ್ ಗಳಲ್ಲಿ ಮಾತ್ರ ಲಭ್ಯವಿದೆ. ಕೇರಳದ ಪ್ರಕೃತಿಯ ಮಡಿಲಲ್ಲಿ ಕಚೇರಿ ಕೆಲಸವನ್ನು ಮಾಡಬಹುದು. ಹೊಟೇಲ್ ರೂಮ್ ಕಾಯ್ದಿರಿಸಲು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ಪ್ರವಾಸೋದ್ಯಮ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಬೇಕು.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮನೆಯಿಂದ ಕೆಲಸ ಮಾಡುವವರಿಗೆ ವರ್ಕ್ ಫ್ರಮ್ ಹೋಟೆಲ್ ಉತ್ತಮ ಆಯ್ಕೆಯಾಗಿದೆ. ಈ ಪ್ಯಾಕೇಜ್ 10,126 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಮೂರು ಜನರು ಐದು ರಾತ್ರಿ ಒಂದು ರೂಮಿನಲ್ಲಿ ಇರಬಹುದು. ಪ್ಯಾಕೇಜ್ ಸೋಂಕು ರಹಿತ ಕೊಠಡಿ, ಎಲ್ಲಾ ಮೂರು ಊಟ, ಎರಡು ಬಾರಿ ಚಹಾ / ಕಾಫಿ, ವೈ-ಫೈ, ಸುರಕ್ಷಿತ ಕಾರ್ ಪಾರ್ಕಿಂಗ್ ಮತ್ತು ಪ್ರಯಾಣ ವಿಮೆ ಒಳಗೊಂಡಿದೆ. ಅಂದರೆ, ಈ ಪ್ಯಾಕೇಜ್‌ನಲ್ಲಿ ಯಾವುದೇ ಪ್ರತ್ಯೇಕ ಮೊತ್ತವನ್ನು ಪಾವತಿಸಬೇಕಾಗಿಲ್ಲ.

ಈ ಪ್ಯಾಕೇಜ್ ನಲ್ಲಿ ಸೋಂಕು ರಹಿತ ರೂಮ್, ಮೂರು ಸಮಯ ಊಟ, ಎರಡು ಬಾರಿ ಟೀ/ಕಾಫಿ, ವೈಫೈ, ಸುರಕ್ಷಿತ ಕಾರ್ ಪಾರ್ಕಿಂಗ್, ಪ್ರಯಾಣ ವಿಮೆ ಸೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...