alex Certify BIG NEWS: ಜಿಯೋ ಮೇಲೆ ಮತ್ತೊಂದು ಕಂಪನಿಯಿಂದ ಬೃಹತ್ ಮೊತ್ತದ ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಿಯೋ ಮೇಲೆ ಮತ್ತೊಂದು ಕಂಪನಿಯಿಂದ ಬೃಹತ್ ಮೊತ್ತದ ಹೂಡಿಕೆ

ಅತಿ ದೊಡ್ಡ ರಿಲಾಯನ್ಸ್ ಇಂಡಸ್ಟ್ರೀಸ್ ಕಂಪನಿ ತನ್ನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಹೂಡಿಕೆ ಹೆಚ್ಚಾಗುತ್ತಿದ್ದಂತೆಯೇ ಇತ್ತೀಚೆಗಷ್ಟೆ ಸಾಲಮುಕ್ತವಾಗಿತ್ತು. ಈ ವಿಚಾರವನ್ನು ಸ್ವತಃ ಮುಖೇಶ್ ಅಂಬಾನಿಯೇ ಘೋಷಣೆ ಮಾಡಿದ್ದರು. ಇದೀಗ ಮತ್ತೊಂದು ವಿಚಾರ ಜಿಯೋ ಕಂಪನಿಯಿಂದ ಹೊರ ಬಿದ್ದಿದೆ.

ಕಳೆದ 78 ದಿನಗಳಲ್ಲಿ ಜಿಯೋ ಮೇಲಿನ ಹೂಡಿಕೆ ಹೆಚ್ಚಾಗಿತ್ತು. ಇದೀಗ ಇಂಟೆಲ್ ಕಂಪನಿ, ಜಿಯೋ ಮೇಲೆ ಹೂಡಿಕೆ ಮಾಡಿದೆ. ಜಿಯೋ ಮೇಲೆ ಇದು 12 ನೇ ಹೂಡಿಕೆ ಆಗಿದೆ. ಅಮೆರಿಕ ಮೂಲದ ಟೆಕ್ನಾಲಜಿ ಕಂಪನಿಯಾಗಿರುವ ಇಂಟೆಲ್​ ಕಂಪನಿ ಜಿಯೋದ 0.39 ಪಾಲನ್ನು 1894 ಕೋಟಿ ರೂಪಾಯಿಗೆ ಖರೀದಿಸಿದೆ. ಕೇವಲ 11 ವಾರಗಳಲ್ಲಿ ಒಟ್ಟು 12 ಹೂಡಿಕೆಗಳು ಜಿಯೋ ಮೇಲೆ ಆಗಿದೆ.

ಫೇಸ್​ಬುಕ್​, ಸಿಲ್ವರ ಲೇಕ್​ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್​, ಜನರಲ್​ ಅಟ್ಲಾಂಟಿಕ್​, ಕೆಕೆಆರ್​, ಮುಬದಲ, ಎಡಿಐಎ, ಟಿಪಿಜಿ, ಎಲ್​ ಕ್ಯಾಟರ್ಟನ್​, ಪಿಐಎಫ್​ ಮತ್ತು ಇಂಟೆಲ್​ ಸೇರಿದಂತೆ ಒಟ್ಟು 12 ಕಂಪನಿಗಳು ಜಿಯೋ ಮೇಲೆ ಹೂಡಿಕೆ ಮಾಡಿದೆ. ಈ ಬಗ್ಗೆ ಮುಖೇಶ್ ಅಂಬಾನಿ ಮಾತ‌ನಾಡಿದ್ದು ಖುಷಿ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...