ಹಸುವಿನ ಸಗಣಿಯಿಂದ ಹೊಸ ರೀತಿ ಪೇಂಟ್ ಅನ್ನು ತಯಾರಿಸುವ ಆವಿಷ್ಕಾರೀ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೇಶದಲ್ಲೇ ಮೊದಲ ಬಾರಿಗೆ ಇಂಥ ಒಂದು ಪೇಂಟ್ ಅನ್ನು ಜನವರಿ 12ರಂದು ಲಾಂಚ್ ಮಾಡಿದ್ದಾರೆ. ಈ ಪೇಂಟ್ ಅನ್ನು ಖಾದಿ ಹಾಗೂ ಗ್ರಾಮೋದ್ಯೋಗ ಉದ್ಯೋಗಗಳ ಸಮಿತಿ ಅಭಿವೃದ್ಧಿಪಡಿಸಿದೆ.
’ಖಾದಿ ಪ್ರಾಕೃತಿಕ ಪೇಂಟ್’ ಎಂದು ಕರೆಯಲಾಗುವ ಮೊಟ್ಟ ಮೊದಲ ರೀತಿಯ ಈ ಪೇಂಟ್ ಪರಿಸರ ಸ್ನೇಹಿ ಹಾಗೂ ಟಾಕ್ಸಿಕ್ ರಹಿತವಾಗಿರುವುದಲ್ಲದೇ ಯಾವುದೇ ಫಂಗಸ್ ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಪೇಂಟ್ ಕೈಗೆಟುಕುವ ದರದಲ್ಲಿ ಸಿಗಲಿದ್ದು, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸನಿಂದ ಪ್ರಮಾಣೀಕೃತವಾಗಿದೆ.
ಡಿಸ್ಟಂಪರ್ ಹಾಗೂ ಪ್ಲಾಸ್ಟಿಕ್ ಎಮಲ್ಶನ್‌ಗಳ ರೂಪದಲ್ಲಿ ಈ ಖಾದಿ ಪ್ರಾಕೃತಿಕ ಪೇಂಟ್ ಲಭ್ಯವಿದೆ.