ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ ಕೌಂಟರ್ ಟಿಕೆಟ್ಗಳನ್ನ ರದ್ದುಗೊಳಿಸಲು ಹಾಗೂ ಮೀಸಲಾತಿ ಕೌಂಟರ್ಗಳಲ್ಲಿ ಶುಲ್ಕ ಮರುಪಾವತಿ ಪಡೆಯಲು ಭಾರತೀಯ ರೈಲ್ವೇ ಇಲಾಖೆ ಈವರೆಗೆ ಇದ್ದ ಆರು ತಿಂಗಳ ಅವಧಿಯನ್ನ ಒಂಬತ್ತು ತಿಂಗಳಿಗೆ ವಿಸ್ತರಿಸಿದೆ.
ಈ ಹೊಸ ತಿದ್ದುಪಡಿ ಭಾರತೀಯ ರೈಲ್ವೆ ಇಲಾಖೆ ರದ್ದು ಮಾಡಿದ ಸಾಮಾನ್ಯ ವೇಳಾಪಟ್ಟಿಯ ರೈಲೆಗಳಿಗೆ ಮಾತ್ರ ಅನ್ವಯಿಸುತ್ತೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಒಂದು ವೇಳೆ 139 ಅಥವಾ ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಕಳೆದ ವರ್ಷದ ಮಾರ್ಚ್ 21ರಿಂದ ಜುಲೈ 31ರೊಳಗಿನ ರದ್ದಾದ ರೈಲುಗಳ ಟಿಕೆಟ್ಗಳನ್ನ ಸರೆಂಡರ್ ಮಾಡಿದ್ದರೆ ಹಣ ಮರುಪಾವತಿಯಾಗಲಿದೆ.
ಈ ಹಿಂದೆ ಕೊರೊನಾ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕ್ಕೊಂಡು ಟಿಕೆಟ್ ರದ್ದತಿ ಹಾಗೂ ಶುಲ್ಕ ಮರುಪಾವತಿ ವಿಚಾರವಾಗಿ ಮಾರ್ಗಸೂಚಿ ನೀಡಲಾಗಿತ್ತು. ಇದೀಗ ಭಾರತೀಯ ರೈಲ್ವೆ ಇಲಾಖೆ ಈ ಮಿತಿಯನ್ನ ವಿಸ್ತರಣೆ ಮಾಡಿದೆ.