alex Certify YouTube ನೂತನ CEO ಭಾರತೀಯ ನೀಲ್ ಮೋಹನ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

YouTube ನೂತನ CEO ಭಾರತೀಯ ನೀಲ್ ಮೋಹನ್ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರು ಯೂಟ್ಯೂಬ್‌ನ ಮುಂದಿನ ಸಿಇಒ ಆಗಲಿದ್ದಾರೆ. ಸುಸಾನ್ ವೊಜ್ಸಿಕಿ ಅವರು ಕೆಳಗಿಳಿಯುವುದಾಗಿ ಘೋಷಿಸಿದ ನಂತ0ರ ನೀಲ್ ಮೋಹನ್ ಉನ್ನತ ಹುದ್ದೆಗೇರಿದ ಮತ್ತೊಬ್ಬ ಭಾರತೀಯನಾಗಲಿದ್ದಾರೆ.

ನೀಲ್ 2008 ರಲ್ಲಿ Google ಗೆ ಸೇರಿದರು. ಅಂದಿನಿಂದ ಅವರು ಟೆಕ್ ದೈತ್ಯರೊಂದಿಗೆ ಸಂಬಂಧ ಹೊಂದಿದ್ದಾರೆ. 2013 ರಲ್ಲಿ ಅವರಿಗೆ 544 ಕೋಟಿ ರೂ. ಬೋನಸ್ ನೀಡಲಾಯಿತು. ಈಗ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾತ್ರಕ್ಕೆ ಬಡ್ತಿ ನೀಡಲಾಗಿದೆ.

ವರದಿಗಳ ಪ್ರಕಾರ, 2014 ರಲ್ಲಿ ಸಿಇಒ ಆಗಿ ನೇಮಕಗೊಂಡಿದ್ದ ಈಗ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಅವರು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಮತ್ತು ಅವರ ಆರೋಗ್ಯದ ಮೇಲೆ ಕೇಂದ್ರೀಕರಿಸಲು ಬಯಸಿದ್ದರಿಂದ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಧನ್ಯವಾದಗಳು, @SusanWojcicki. ವರ್ಷಗಳಲ್ಲಿ ನಿಮ್ಮೊಂದಿಗೆ ಕೆಲಸ ಮಾಡುವುದು ಅದ್ಭುತವಾಗಿದೆ. ನೀವು ರಚನೆಕಾರರು ಮತ್ತು ವೀಕ್ಷಕರಿಗೆ ಅಸಾಮಾನ್ಯ ನೆಲೆಯಾಗಿ YouTube ಅನ್ನು ನಿರ್ಮಿಸಿದ್ದೀರಿ. ಈ ಅದ್ಭುತ ಮತ್ತು ಪ್ರಮುಖ ಮಿಷನ್ ಅನ್ನು ಮುಂದುವರಿಸಲು ನಾನು ಉತ್ಸುಕನಾಗಿದ್ದೇನೆ. ಎದುರುನೋಡುತ್ತಿದ್ದೇನೆ ಎಂದು ನೀಲ್ ಮೋಹನ್ ಟ್ವೀಟ್ ಮಾಡಿದ್ದಾರೆ.

ನೀಲ್ ಮೋಹನ್ ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿ ಮಾರ್ಗ

ನೀಲ್ ಮೋಹನ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಅವರು ತಮ್ಮ ವೃತ್ತಿಜೀವನವನ್ನು ಗ್ಲೋರಿಫೈಡ್ ಟೆಕ್ನಿಕಲ್ ಸಪೋರ್ಟ್ ಹೆಸರಿನ ಕಂಪನಿಯೊಂದಿಗೆ ಪ್ರಾರಂಭಿಸಿದರು.

ಗೂಗಲ್‌ಗೆ ಸೇರುವ ಮೊದಲು, ಅವರು ಆಕ್ಸೆಂಚರ್‌ನಲ್ಲಿ ಹಿರಿಯ ವಿಶ್ಲೇಷಕರಾಗಿ ಕೆಲಸ ಮಾಡಿದರು, ನಂತರ ಡಬಲ್‌ಕ್ಲಿಕ್ ಇಂಕ್‌ಗೆ ಸೇರಿಕೊಂಡರು, ನಂತರ ಈ ಕಂಪನಿಯಲ್ಲಿ ಗ್ಲೋಬಲ್ ಕ್ಲೈಂಟ್ ಸೇವೆಗಳ ನಿರ್ದೇಶಕರಾಗಿ 3 ವರ್ಷ ಮತ್ತು 5 ತಿಂಗಳು ಕೆಲಸ ಮಾಡಿದರು. ಸುಮಾರು ಎರಡೂವರೆ ವರ್ಷಗಳ ಕಾಲ ವ್ಯಾಪಾರ ಕಾರ್ಯಾಚರಣೆಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು.

ನೀಲ್ ಕೂಡ ಮೈಕ್ರೋಸಾಫ್ಟ್‌ ಗೆ ಸೇರಿಕೊಂಡರು ಮತ್ತು 4 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರು ಮತ್ತೆ ಡಬಲ್ ಕ್ಲಿಕ್ ಇಂಕ್‌ಗೆ ಬಂದು 3 ವರ್ಷಗಳ ಕಾಲ ಕೆಲಸ ಮಾಡಿದರು.

ನಂತರ ಅವರು 2008 ರಲ್ಲಿ ಗೂಗಲ್‌ಗೆ ಹಿರಿಯ ಉಪಾಧ್ಯಕ್ಷ, ಡಿಸ್‌ಪ್ಲೇ ಮತ್ತು ವೀಡಿಯೊ ಜಾಹೀರಾತು ಆಗಿ ಸೇರಿಕೊಂಡರು. ನಂತರ ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿರುವ ಸಿಪಿಒ ಆಗಿದ್ದರು. ಈಗ ಯೂಟ್ಯೂಬ್‌ನ ಹೊಸ ಸಿಇಒ ಆಗಿ ನೀಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...