alex Certify BIG NEWS: ಕೊರೋನಾ ಲಸಿಕೆ ಪಡೆದ ದಾಖಲೆ ಕಡ್ಡಾಯ, ಪಾಸ್ಪೋರ್ಟ್ ರೀತಿ ಇ –ವ್ಯಾಕ್ಸಿನ್ ದಾಖಲೆ ಅಗತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೋನಾ ಲಸಿಕೆ ಪಡೆದ ದಾಖಲೆ ಕಡ್ಡಾಯ, ಪಾಸ್ಪೋರ್ಟ್ ರೀತಿ ಇ –ವ್ಯಾಕ್ಸಿನ್ ದಾಖಲೆ ಅಗತ್ಯ

ವಾಷಿಂಗ್ಟನ್: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಕೊರೋನಾ ಲಸಿಕೆ ನೀಡುತ್ತಿದ್ದು, ಲಸಿಕೆ ಪಡೆದುಕೊಂಡವರಿಗೆ ದಾಖಲೆ ಕಡ್ಡಾಯ ಮಾಡಲಾಗುತ್ತಿದೆ.

ಇ – ವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಿದೆ. 2 ಡೋಸ್ ಅಧಿಕೃತ ಕೊರೋನಾ ತಡೆ ಲಸಿಕೆ ಪಡೆದ ದಾಖಲೆಯನ್ನು ಕಡ್ಡಾಯವಾಗಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಬೇರೆ ದೇಶಗಳಿಗೆ ತೆರಳುವಾಗ ಪಾಸ್ಪೋರ್ಟ್ ಗಳ ರೀತಿಯಲ್ಲಿ ಇ -ವ್ಯಾಕ್ಸಿನ್ ಪ್ರಮಾಣ ಪತ್ರ ದಾಖಲೆ ಪಡೆದ ಕೂಡ ಅಗತ್ಯವಿರುತ್ತದೆ.

ಅಮೆರಿಕದ ಶ್ವೇತಭವನದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಆಂಟನಿ ಫೌಸಿ ಅವರು ಈ ಬಗ್ಗೆ ಮಾತನಾಡಿ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗ ಮುಂದಿನ ದಿನಗಳಲ್ಲಿ ಪಾಸ್ಪೋರ್ಟ್ ಜೊತೆಗೆ ಇ – ವ್ಯಾಕ್ಸಿನ್ ಪ್ರಮಾಣ ಪತ್ರ ಹೊಂದುವುದು ಕಡ್ಡಾಯವಾಗಬಹುದು. ಆದರೆ, ಅಮೆರಿಕದಲ್ಲಿ ಕಡ್ಡಾಯ ಮಾಡುವ ಚಿಂತನೆ ಇಲ್ಲ. ವಿಶ್ವದಲ್ಲಿ ಹೆಚ್ಚು ಜನ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...