ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಕ್ರಮಕೈಗೊಂಡಿರುವ ಸರ್ಕಾರ ಸೋಂಕಿತರಿಗೆ ಜೀವರಕ್ಷಕ ಎಂದೇ ಹೇಳಲಾಗುವ ರೆಮ್ ಡೆಸಿವಿರ್ ಔಷಧ ಮೇಲಿನ ಆಮದು ಸುಂಕವನ್ನು ತೆರವುಗೊಳಿಸಿದೆ.
ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಂಟಿ ವೈರಸ್ ಔಷಧ ರೆಮ್ ಡೆಸಿವಿರ್ ಬಳಕೆ ಮಾಡಲಾಗುತ್ತದೆ. ಔಷಧದ ಮೇಲಿನ ಆಮದು ಸುಂಕವನ್ನು ಭಾರತ ಸರ್ಕಾರ ತೆರವುಗೊಳಿಸಿದೆ. ಮಂಗಳವಾರ ತಡರಾತ್ರಿ ಹಣಕಾಸು ಮಂತ್ರಾಲಯ ಅಧಿಸೂಚನೆ ಹೊರಡಿಸಿ ರೆಮ್ ಡೆಸಿವಿರ್ ಔಷಧಿ ತಯಾರಿಕೆಗೆ ಬಳಸುವ ಪದಾರ್ಥಗಳ ಆಮದು ಮೇಲಿನ ಸುಂಕವನ್ನು ರದ್ದು ಮಾಡಲಾಗಿದೆ. ಬಳಕೆಗೆ ಸಿದ್ಧವಾದ ರೆಮ್ ಡೆಸಿವಿರ್ ಇಂಜೆಕ್ಷನ್ ಮೇಲೆ ವಿನಾಯಿತಿ ನೀಡಲಾಗಿದ್ದು, ಈ ಅಧಿಸೂಚನೆ ಅಕ್ಟೋಬರ್ 31 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹಣಕಾಸು ಮಂತ್ರಾಲಯ ತಿಳಿಸಿದೆ.