ಇಂಟರ್ನೆಟ್ ಸ್ಪೀಡ್ನಲ್ಲಿ ಹಿನ್ನಡೆ ಸಾಧಿಸಿರುವ ಭಾರತ ಸೆಪ್ಟೆಂಬರ್ ತಿಂಗಳ ಅಂತ್ಯದ ವೇಳೆ ಪಾಕಿಸ್ತಾನ ಹಾಗೂ ನೇಪಾಳಕ್ಕಿಂತಲೂ ಕಡಿಮೆ ಸ್ಥಾನವನ್ನ ಪಡೆದುಕೊಂಡಿದೆ.
ಓಕ್ಲಾ ಸೆಪ್ಟೆಂಬರ್ ವೇಗ ಪರೀಕ್ಷಾ ಸೂಚ್ಯಂಕದ ಪ್ರಕಾರ ದಕ್ಷಿಣ ಕೊರಿಯಾ ಮೊಬೈಲ್ ಇಂಟರ್ನೆಟ್ ಸ್ಪೀಡ್ನಲ್ಲಿ 121 ಎಂಬಿಪಿಎಸ್ ಮೂಲಕ ಮೊದಲ ಸ್ಥಾನವನ್ನ ಪಡೆದಿದೆ. ಇತ್ತ ಭಾರತ 12.07 ಎಂಬಿಪಿಎಸ್ ಹೊಂದುವ ಮೂಲಕ 131ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿಗೆ ಹೋಲಿಸಿದ್ರೆ ಭಾರತ ಇನ್ನೂ ಎರಡು ಸ್ಥಾನ ಕುಸಿತ ಕಂಡಿದೆ.
ಪಾಕಿಸ್ತಾನ 116 ಸ್ಥಾನದಲ್ಲಿದ್ದರೆ ನೇಪಾಳ 117 ಸ್ಥಾನವನ್ನ ಪಡೆದಿದೆ. ಶ್ರೀಲಂಕಾ 19.95 ಎಂಬಿಪಿಎಸ್ ಮೊಬೈಲ್ ಇಂಟರ್ನೆಟ್ ವೇಗವನ್ನ ಹೊಂದಿದೆ. 12.24 ಎಂಬಿಪಿಎಸ್ ವೇಗವನ್ನ ಹೊಂದಿರುದ ಇರಾಕ್ ಭಾರತಕ್ಕಿಂತ ಸ್ವಲ್ಪ ಮುಂದಿದೆ.