ನವದೆಹಲಿ: ಭಾರತ ಆಮದು ಮಾಡಿಕೊಳ್ಳುವ ತೊಗರಿ ಬೇಳೆಯಲ್ಲಿ ಶೇಕಡ 50ರಷ್ಟು ಮೊಜಾಂಬಿಕ್ ನಿಂದ ಬರುತ್ತದೆ. ಆದರೆ, ಆಮದು ವಿಳಂಬ ಆಗಿರುವ ಕಾರಣ ದೇಶದಲ್ಲಿ ತೊಗರಿ ಬೇಳೆ ದರ ಏರಿಕೆಯತ್ತ ಸಾಗಿದೆ ಎಂದು ಭಾರತದ ಮೊಜ್ ಗ್ರೇನ್ ಎಲ್.ಡಿ.ಎ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸುಹಾಸ್ ಚೌಗಲೆ ಹೇಳಿದ್ದಾರೆ.
ಭಾರತಕ್ಕೆ ಬರಬೇಕಿರುವ 1.50 ಲಕ್ಷ ಟನ್ ತೊಗರಿ ಬೇಳೆಯನ್ನು ಮೊಜಾಂಬಿಕ್ ಬಂದರಿನಲ್ಲಿ ಕಳೆದ ಕೆಲವು ವಾರಗಳಿಂದ ತಡೆ ಹಿಡಿಯಲಾಗಿದೆ. ರಫ್ತು ಅನುಮತಿಗೆ ಕೋರಿದ್ದರೂ ಕಸ್ಟಮ್ಸ್ ಅಧಿಕಾರಿಗಳು ಸ್ಪಂದಿಸಿಲ್ಲ. ಮೊಜಾಂಬಿಕ್ ಬಂದರಿನ ಗೋದಾಮಗಳಲ್ಲಿ ತೊಗರಿಬೇಳೆ ದಾಸ್ತಾನು ಇಡಲಾಗಿದ್ದು, ದಾಸ್ತಾನು ವೆಚ್ಚ ಭರಿಸುವಂತಾಗಿದೆ. ಆಮದಿಗೆ ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಮಾರಾಟಗಾರರಿಂದ ಹಲವಾರು ವಿನಂತಿಗಳ ಹೊರತಾಗಿಯೂ ಕಸ್ಟಮ್ಸ್ ನಿಂದ ರಫ್ತು ಅನುಮತಿಗಾಗಿ ಕಾಯುತ್ತಿರುವ ಮೊಜಾಂಬಿಕ್ ನ ಬಂದರುಗಳಲ್ಲಿ ಕನಿಷ್ಠ 1,50,000 ಮೆಟ್ರಿಕ್ ಟನ್ ತೊಗರಿ ಬೇಳೆ ಎಂದು ಐದು ಉದ್ಯಮ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.