alex Certify ಇ ವಾಲೆಟ್​​ & ಯುಪಿಐ ವ್ಯವಹಾರ ಮಾಡುವ ಮುನ್ನ ನೆನಪಿಡಿ ಈ ಪ್ರಮುಖ ಅಂಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ ವಾಲೆಟ್​​ & ಯುಪಿಐ ವ್ಯವಹಾರ ಮಾಡುವ ಮುನ್ನ ನೆನಪಿಡಿ ಈ ಪ್ರಮುಖ ಅಂಶ

ದೇಶದಲ್ಲಿ ಇದೀಗ ಯುಪಿಐ ವಹಿವಾಟು ಹಾಗೂ ಇ ವಾಲೆಟ್​ಗಳ ಬಳಕೆ ಹೆಚ್ಚಾಗಿದೆ. ನಗದು ವ್ಯವಹಾರದ ಮಿತಿ, ಹಣ ಡ್ರಾ ಶುಲ್ಕ, ಎಟಿಎಂ ಸಮಸ್ಯೆಗಳಿಂದಾಗಿ ಬೇಸತ್ತ ಜನರು ಈಗೀಗ ಯುಪಿಐ ವ್ಯವಹಾರಕ್ಕೆ ಹೆಚ್ಚು ಮೊರೆ ಹೋಗ್ತಿದ್ದಾರೆ.

ಯುಪಿಐ ಹಾಗೂ ಇ ವ್ಯಾಲೆಟ್​ ವಹಿವಾಟು ನಡೆಸುವ ಮುನ್ನ ನೀವು ಕೆಲವು ಅಂಶಗಳನ್ನ ಗಮನದಲ್ಲಿ ಇಡಬೇಕು. ಆದಾಯ ತೆರಿಗೆ ನಿಯಮಗಳ ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸುವ ವೇಳೆಯಲ್ಲಿ ಇತರ ಮೂಲಗಳಿಂದ ಬರುವ ಆದಾಯ, ಕ್ಯಾಪಿಟಲ್​ ಗೇನ್ಸ್ ಗಳನ್ನ ವರದಿ ಮಾಡುವಂತೆ ಯುಪಿಐ ಹಾಗೂ ಇ ವ್ಯಾಲೆಟ್​ ಮೂಲಕ ಹಣ ಪಡೆದ ಬಗ್ಗೆಯೂ ವಿವರಣೆ ಸಲ್ಲಿಸೋದು ಕಡ್ಡಾಯವಾಗಿರಲಿದೆ.

ರೈಲು ಹಳಿತಪ್ಪಿ ಭೀಕರ ಅಪಘಾತ: ಕನಿಷ್ಠ 11 ಮಂದಿ ಸಾವು, 100 ಜನರಿಗೆ ಗಾಯ –ಈಜಿಪ್ಟ್ ನಲ್ಲಿ ದುರಂತ

ಯುಪಿಐ ಹಾಗೂ ಇ ವ್ಯಾಲೆಟ್​ಗಳು ಸಹ ತೆರಿಗೆಯ ಅಡಿಯಲ್ಲೇ ಬರುತ್ತವೆ. ಯುಪಿಐ ಹಾಗೂ ಇ ವ್ಯಾಲೆಟ್​ಗಳ ಮೂಲಕ ನೀವು ವ್ಯವಹಾರ ನಡೆಸಿದ್ರೂ ಸಹ ನಿಮಗೆ ತೆರಿಗೆಯನ್ನ ವಿಧಿಸಲಾಗುತ್ತದೆ. ಇ ವ್ಯಾಲೆಟ್​ಗಳಲ್ಲಿ ವ್ಯವಹಾರ ನಡೆಸಲು ಗ್ರಾಹಕರನ್ನ ಸೆಳೆಯುವ ಸಲುವಾಗಿ ಕ್ಯಾಶ್​ಬ್ಯಾಕ್​ ಆಫರ್​ಗಳನ್ನ ನೀಡಲಾಗುತ್ತೆ. ಇದೇ ಕಾರಣಕ್ಕೆ ಜನರು ನಗದು ವ್ಯವಹಾರಕ್ಕಿಂತ ಇ ವಾಲೆಟ್​ಗಳತ್ತ ಹೆಚ್ಚು ಆಕರ್ಷಿತರಾಗ್ತಾರೆ. ಆದರೆ ಈ ಕ್ಯಾಶ್​ ಬ್ಯಾಕ್​ ಮೊತ್ತ 1 ಹಣಕಾಸು ವರ್ಷದಲ್ಲಿ 50 ಸಾವಿರ ರೂಪಾಯಿ ಮೀರಿದ್ರೆ ನಿಮಗೆ ತೆರಿಗೆ ಬೀಳಲಿದೆ.

ಹಣ ವರ್ಗಾವಣೆಗೆ 1 ಲಕ್ಷ ರೂಪಾಯಿಗಳನ್ನ ಗರಿಷ್ಟ ಮಿತಿ ಎಂದು ಪರಿಗಣಿಸಲಾಗಿದೆ. ಆದರೆ ಈ ಮಿತಿಯನ್ನ ಮೀರಿದ್ರೆ ಆ ಮೊತ್ತ ತೆರಿಗೆ ವ್ಯಾಪ್ತಿಗೆ ಒಳಪಡಲಿದೆ. ಯುಪಿಐ ಮೂಲಕ ನಿಮ್ಮ ಉದ್ಯೋಗದಾತರು ನಿಮಗೆ 5000 ರೂ.ಗಿಂತ ಹೆಚ್ಚಿನ ಹಣವನ್ನ ಉಡುಗೊರೆ ರೂಪದಲ್ಲಿ ನೀಡಿದ್ರೆ ಆದಾಯ ತೆರಿಗೆ ನಿಯಮ 3 (7) (iv) ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತೆ. ಇದು ಮಾತ್ರವಲ್ಲದೇ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಒಂದು ವರ್ಷದಲ್ಲಿ 50000 ಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನ ನೀವು ವೋಚರ್​ ರೂಪದಲ್ಲಿ ಪಡೆದಿದ್ದರೆ ಅದಕ್ಕೂ ತೆರಿಗೆ ಕಟ್ಟಬೇಕು.

ಯುಪಿಐನಿಂದ ನಡೆಸಿದ ಹಣದ ವ್ಯವಹಾರದ ಮೇಲೆ ಯಾರೂ ಕಣ್ಣಿಡೋದಿಲ್ಲ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪು ಕಲ್ಪನೆಯಾಗಿದೆ. ಭಾರತೀಯ ಆದಾಯ ತೆರಿಗೆ ಇಲಾಖೆ ಪ್ರತಿಯೊಂದು ವ್ಯವಹಾರಗಳ ಮೇಲೂ ಕಣ್ಣಿಡುತ್ತದೆ ಎಂಬ ಅಂಶವನ್ನ ನೀವು ಮರೆಯುವ ಹಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...