ಆದಾಯ ತೆರಿಗೆ ಇಲಾಖೆಯು ತೆರಿಗೆದಾರರ ಅನುಕೂಲಕ್ಕಾಗಿ ಬುಧವಾರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಇದು ವಾರ್ಷಿಕ ಮಾಹಿತಿ ಹೇಳಿಕೆ(ಎಐಎಸ್) ಮತ್ತು ತೆರಿಗೆದಾರರ ಮಾಹಿತಿ ಸಾರಾಂಶದಲ್ಲಿ(ಟಿಐಎಸ್) ಲಭ್ಯವಿರುವ ಮಾಹಿತಿಯನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
‘ಎಐಎಸ್ ಫಾರ್ ಟ್ಯಾಕ್ಸ್ ಪೇಯರ್’ ಎಂದು ಕರೆಯಲ್ಪಡುವ ಈ ಹೊಸ ಮೊಬೈಲ್ ಆಪ್ ಅನ್ನು ಆದಾಯ ತೆರಿಗೆ ಇಲಾಖೆಯು ಉಚಿತವಾಗಿ ನೀಡಲಿದ್ದು, ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಹೊಸ ITR ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲು, ತೆರಿಗೆದಾರರು ತಮ್ಮ PAN ಸಂಖ್ಯೆಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್‌ನಲ್ಲಿ ಕಳುಹಿಸಲಾದ OTP ಯೊಂದಿಗೆ ದೃಢೀಕರಿಸಬೇಕು. ದೃಢೀಕರಣದ ನಂತರ, ತೆರಿಗೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರವೇಶಿಸಲು 4-ಅಂಕಿಯ ಪಿನ್ ಅನ್ನು ಹೊಂದಿಸಬಹುದು.