ಕೋವಿಡ್-19 ರೋಗಲಕ್ಷಣಗಳನ್ನು ಬಹಳ ಬೇಗನೆ ಪತ್ತೆ ಮಾಡಬಲ್ಲ ರಿಸ್ಟ್ ವಾಚ್ ಒಂದನ್ನು ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ್ದು, ಇದು ಮುಂದಿನ ತಿಂಗಳಿನಿಂದ ಮಾರ್ಕೆಟ್‌ನಲ್ಲಿ ಸಿಗುವ ಸಾಧ್ಯತೆ ಇದೆ.
ಈ ರಿಸ್ಟ್ ವಾಚ್‌ನಲ್ಲಿ ಚರ್ಮದ ತಾಪಮಾನ ಪತ್ತೆ ಮಾಡುವ ಸೆನ್ಸಾರ್‌ಗಳಿದ್ದು, ಹೃದಯಬಡಿತ ಹಾಗೂ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ತಿಳಿಯಲು ನಿರಂತರವಾಗಿ ಟ್ರಾಕ್ ಮಾಡಬಲ್ಲ ವ್ಯವಸ್ಥೆ ಇದ್ದು, ಕೋವಿಡ್-19 ರೋಗ ಲಕ್ಷಣಗಳನ್ನು ತಿಳಿಯಲು ನೆರವಾಗುತ್ತದೆ.
ಇಂಥ ಉದ್ದೇಶಕ್ಕೆಂದು ಇನ್‌ಕ್ಯೂಬೇಷನ್ ಹಂತದಲ್ಲಿರುವ ಸ್ಟಾರ್ಟ್ ಅಪ್ ಅನ್ನು 22 ಕೋಟಿ ರೂ.ಗಳ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. “Muse wearbales” ಹೆಸರಿನ ಈ ಸ್ಟಾರ್ಟ್ ಅಪ್ ಅನ್ನು ವಾರಂಗಲ್‌ನ NIT ಸಹಯೋಗದೊಂದಿಗೆ ಐಐಟಿ ಮದ್ರಾಸ್ ನಲ್ಲಿ ಓದಿದ ಪದವೀಧರರು ಸೇರಿಕೊಂಡು ಪ್ರಾರಂಭಿಸಿದ್ದಾರೆ.