ಬರೋಬ್ಬರಿ 130 ವರ್ಷಗಳಿಂದ ಸೇವೆ ಸಲ್ಲಿಸಿದ್ದ ವಿನೋನಾ ಮೂಲದ ಗೋಲ್ಕ್ಟ್ ಫಾರ್ಮಸಿ ಕಳೆದ ವಾರ ತನ್ನ ಸೇವೆಯನ್ನ ಅಂತ್ಯಗೊಳಿಸಿದೆ. ಈ ಕಂಪನಿಯ ಎಲ್ಲಾ ಮಳಿಗೆಗಳನ್ನ ಅಮೆರಿಕದ ಎರಡನೇ ಅತಿ ದೊಡ್ಡ ಫಾರ್ಮಸಿ ವಾಲ್ ಗ್ರೀನ್ಸ್ ಖರೀದಿಸಿದೆ.
ಒಂದು ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸ ಹೊಂದಿದ್ದ ಈ ಔಷಧಾಲಯ ಮುಚ್ಚಲು ಪ್ರಮುಖ ಕಾರಣ ಇದರ ವಿಮಾ ಯೋಜನೆ. ಈಗಿನ ಫಾರ್ಮಸಿ ದರದಲ್ಲಿ ಔಷಧಿಗಳನ್ನ ಖರೀದಿ ಮಾಡಲು ಅಸಾಧ್ಯವಾದ ಕಾರಣ ತಮ್ಮ ಕಂಪನಿಯನ್ನ ಬಂದ್ ಮಾಡ್ತಿರೋದಾಗಿ ತಮ್ಮ ನಿಷ್ಠಾವಂತ ಕ್ಲೈಂಟ್ಸ್ಗಳಿಗೆ ಗೋಲ್ಟ್ಱ್ ಹೇಳಿದೆ
ಡಾನ್ ಗಾಲ್ಟ್ಜ್ ಮುತ್ತಜ್ಜ 1888ರಲ್ಲಿ ಗೋಲ್ಟ್ಜ್ ಫಾರ್ಮಸಿಯನ್ನ ಸ್ಥಾಪಿಸಿದ್ರು. ಡಾನ್ ಗೋಲ್ಡ್ಜ್ 2016ರಲ್ಲಿ ಈ ವ್ಯವಹಾರವನ್ನ ಕಾಲೋನಿ ಆರ್ಎಎಕ್ಸ್ ಎಂಬ ಸಣ್ಣ ಸಂಸ್ಥೆಗೆ ಮಾರಾಟ ಮಾಡಿದ್ದರು. ಅಮೆರಿಕದ ಅನೇಕ ಔಷಧಿ ಕಂಪನಿಗಳು ಇದೇ ರೀತಿಯ ಸವಾಲುಗಳನ್ನ ಎದುರಿಸುತ್ತಿವೆ.