alex Certify ಅಕ್ಟೋಬರ್ ಮೊದಲ ದಿನವೇ ಭರ್ಜರಿ ಉಡುಗೊರೆ ನೀಡಿದ ಬ್ಯಾಂಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಟೋಬರ್ ಮೊದಲ ದಿನವೇ ಭರ್ಜರಿ ಉಡುಗೊರೆ ನೀಡಿದ ಬ್ಯಾಂಕ್

ಅಕ್ಟೋಬರ್ ಮೊದಲೇ ದಿನವೇ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಐಸಿಐಸಿಐ ಬ್ಯಾಂಕ್ ಪ್ರಮುಖ ಸಾಲ ದರವನ್ನು ಶೇಕಡಾ 0.05 ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಹೊಸ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬಂದಿವೆ.

ಐಸಿಐಸಿಐ ಬ್ಯಾಂಕ್ ಈ ನಿರ್ಧಾರದಿಂದ ಪ್ರತಿ ತಿಂಗಳ ಇಎಂಐನಲ್ಲಿ ಶೇಕಡಾ 0.05 ರಷ್ಟು ಉಳಿತಾಯವಾಗಲಿದೆ. ಇದರ ಹೊರತಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿದರಗಳನ್ನು ಶೇಕಡಾ 0.05 ರಷ್ಟು ಕಡಿಮೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುಕೋ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿದ್ದವು. ಎರಡೂ ಬ್ಯಾಂಕುಗಳು ಶೇಕಡಾ 0.05 ರಷ್ಟು ಬಡ್ಡಿದರ ಕಡಿತಗೊಳಿಸಿವೆ. ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೂಡ ಎಂಸಿಎಲ್‌ಆರ್ ಅನ್ನು ಶೇಕಡಾ 0.10 ರಷ್ಟು ಕಡಿಮೆ ಮಾಡಿದೆ.

ಐಸಿಐಸಿಐ ಬ್ಯಾಂಕ್ ಕೆಲ ದಿನಗಳ ಹಿಂದೆ ಫೆಸ್ಟಿವಲ್ ಬೊನಾನ್ಜಾ ಶುರು ಮಾಡಿದೆ. ಇದ್ರಲ್ಲಿ ಗ್ರಾಹಕರಿಗೆ ಅನೇಕ ಕೊಡುಗೆ ಸಿಗ್ತಿದೆ. ಅಕ್ಟೋಬರ್ 1ರಿಂದ ಕೆಲ ಕೊಡುಗೆಗಳು ಲಭ್ಯವಾದ್ರೆ ಮತ್ತೆ ಕೆಲವು ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...