ಪುಟ್ಟ ಉಂಗುರದಲ್ಲಿ ಅತಿ ಹೆಚ್ಚು ವಜ್ರಗಳನ್ನ ಜೋಡಿಸುವ ಮೂಲಕ ಹೈದರಾಬಾದ್ ಮೂಲದ ಜ್ಯುವೆಲ್ಲರಿ ಅಂಗಡಿಯೊಂದು ಗಿನ್ನೆಸ್ ರೆಕಾರ್ಡ್ ಪಟ್ಟಿಯಲ್ಲಿ ಸೇರಿದೆ.
ಕೊಟ್ಟಿ ಶ್ರೀಕಾಂತ್ ಮಾಲೀಕತ್ವದ ಚಂದುಬಾಯ್ ಜ್ಯುವೆಲ್ಲರಿ ಶಾಪ್ನಲ್ಲಿ ಬರೋಬ್ಬರಿ 7,801 ವಜ್ರಗಳನ್ನ ಬಳಸಿ ಹೂವಿನ ಆಕಾರದ ಉಂಗುರವನ್ನ ತಯಾರಿಸಲಾಗಿದೆ. ಬ್ರಹ್ಮ ಕಮಲದ ಆಕೃತಿಯಲ್ಲಿ ನಿರ್ಮಾಣವಾಗಿರುವ ಈ ಉಂಗುರಕ್ಕೆ ದಿ ಡಿವೈನ್ – 7801 ಬ್ರಹ್ಮ ವಜ್ರ ಕಮಲಂ ಅಂತಾ ಹೆಸರಿಡಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಜ್ಯುವೆಲ್ಲರಿ ಶಾಪ್ ಮಾಲೀಕ ಕೊಟ್ಟಿ ಶ್ರೀಕಾಂತ್, ನಮ್ಮ ಸಂಪ್ರದಾಯದಲ್ಲಿ ದೇವರನ್ನ ಬ್ರಹ್ಮ ಕಮಲದ ಮೇಲೆ ಕೂರಿಸಿದಂತೆ ಚಿತ್ರಿಸಲಾಗುತ್ತೆ. ಅಲ್ಲದೇ ದೇವರ ಆರಾಧನೆಗೂ ಹೂವುಗಳು ಬೇಕೆ ಬೇಕು. ಹೂವುಗಳು ಅಂದರೆ ಶುದ್ಧತೆಯ ಸಂಕೇತ. ಹೀಗಾಗಿ ಹೂವಿನ ಆಕಾರದಲ್ಲೇ ಉಂಗುರ ಮಾಡಿ ಗಿನ್ನೆಸ್ ಸಾಲಿಗೆ ಸೇರಿದ್ದೇವೆ ಅಂತಾ ಹೇಳಿದ್ರು.
https://www.facebook.com/GuinnessWorldRecords/videos/683348099266809