ವಾಟ್ಸಾಪ್ನ ಹೊಸ ಷರತ್ತು ಹಾಗೂ ನಿಯಮ ಬಳಕೆದಾರರ ಕಣ್ಣು ಕೆಂಪಗಾಗಿಸಿದೆ. ಈ ನಡುವೆ ಸಿಗ್ನಲ್ ಮೆಸೆಜಿಂಗ್ ಅಪ್ಲಿಕೇಶನ್ ಸಿಕ್ಕಾಪಟ್ಟೆ ಪ್ರಸಿದ್ಧಿ ಪಡೆಯುತ್ತಿದೆ.
ಆದರೆ ಅನೇಕರಿಗೆ ವಾಟ್ಸಾಪ್ನ ಗ್ರೂಪ್ಗಳನ್ನ ಹೇಗೆ ಸಿಗ್ನಲ್ಗೆ ವರ್ಗಾವಣೆ ಮಾಡೋದು ಎಂಬ ವಿಧಾನದ ಬಗ್ಗೆ ಮಾಹಿತಿ ಇಲ್ಲ. ಆದರೆ ವಾಟ್ಸಾಪ್ ಗ್ರೂಪ್ನ್ನ ನೀವು ಸಿಗ್ನಲ್ ಅಪ್ಲಿಕೇಶನ್ಗೆ ತುಂಬಾ ಸುಲಭವಾಗಿ ವರ್ಗಾವಣೆ ಮಾಡಬಹುದು.
ಸಿಗ್ನಲ್ ಅಪ್ಲಿಕೇಶನ್ ವಾಟ್ಸಾಪ್ನಂತೆಯೇ ಮೆಸೆಜಿಂಗ್ ಅಪ್ಲಿಕೇಶನ್ ಆಗಿದೆ. ಇಲ್ಲಿ ಪ್ರತಿಯೊಂದು ಮೆಸೆಜ್ಗಳು ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಆಗಿವೆ. ಇದರ ಅರ್ಥ ಮೆಸೇಜ್ ಕಳಿಸುವವರು ಹಾಗೂ ಸ್ವೀಕರಿಸುವವರು ಮಾತ್ರ ಮೆಸೇಜ್ಗಳನ್ನ ನೋಡಬಹುದಾಗಿದೆ. ಇದನ್ನ ಬಿಟ್ಟು ಮತ್ಯಾರೂ ಮೆಸೇಜ್ಗಳನ್ನ ಓದಲಾರರು.