ನೀವು ಒಬ್ಬ ರೈತರಾಗಿದ್ದು ಇಲ್ಲಿಯವರೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನಿಮ್ಮನ್ನ ನೋಂದಾಯಿಸಿಕೊಳ್ಳದಿದ್ದರೆ ನೀವು ಈ ಮಹತ್ವದ ಸುದ್ದಿಯನ್ನ ಓದಲೇಬೇಕು.
ರೈತರಿಗೆಂದೇ ಕೇಂದ್ರ ಸರ್ಕಾರ ರೂಪಿಸಿರುವ ಈ ಯೋಜನೆಯ ಲಾಭವನ್ನ ಪಡೆಯಬೇಕು ಅಂತಿದ್ದರೆ ನೀವು ಮಾರ್ಚ್ 31ರೊಳಗಾಗಿ ನಿಮ್ಮನ್ನ ನೀವು ನೋಂದಾಯಿಸಿಕೊಳ್ಳಬೇಕು.
ಮಾರ್ಚ್ 31ರ ಒಳಗಾಗಿ ನೀವು ಸಲ್ಲಿಸಿದ ಅರ್ಜಿಯನ್ನ ಸ್ವೀಕಾರ ಮಾಡಿದ್ರು ಅಂದರೆ ಮಾರ್ಚ್ ತಿಂಗಳ 2 ಸಾವಿರ ರೂಪಾಯಿ ಹಣ ಕೂಡ ನಿಮ್ಮ ಖಾತೆಗೆ ಬಂದು ಬೀಳಲಿದೆ. ಇದರ ಜೊತೆಯಲ್ಲಿ ಏಪ್ರಿಲ್ ತಿಂಗಳ 2000 ಸಾವಿರ ರೂಪಾಯಿ ಹಣ ಕೂಡ ನಿಮ್ಮ ಖಾತೆಯಲ್ಲಿ ಜಮೆ ಆಗಲಿದೆ. ಈ ರೀತಿಯಾಗಿ ನೀವು ಡಬಲ್ ಲಾಭ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೋಂದಾಯಿಸಿಕೊಳ್ಳಲು ಈ ಹಂತವನ್ನ ಅನುಸರಿಸಿ :
ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಲಾಗಿನ್ ಆಗಿ
ಇಲ್ಲಿ ನ್ಯೂ ರಿಜಿಸ್ಟ್ರೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಈಗ ಹೊಸ ಪೇಜ್ ತೆರೆದುಕೊಳ್ಳಲಿದೆ
ಇಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನ ನಮೂದಿಸಿ ಇದಾದ ಬಳಿಕ ರಿಜಿಸ್ಟ್ರೇಷನ್ ಪೇಜ್ ತೆರೆದುಕೊಳ್ಳಲಿದೆ
ರಿಜಿಸ್ಟ್ರೇಷನ್ ಅರ್ಜಿಯಲ್ಲಿ ನಿಮಗೆ ಕೇಳಲಾಗುವ ಮಾಹಿತಿಗಳನ್ನ ನಮೂದಿಸಬೇಕು
ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಇಲ್ಲವೇ ಗ್ರಾಮದ ಬಗ್ಗೆ ಮಾಹಿತಿಯನ್ನ ನೀಡಬೇಕು
ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಮಾಹಿತಿಯನ್ನ ಲಗತ್ತಿಸಿ
ಎಲ್ಲಾ ಮಾಹಿತಿಗಳನ್ನ ನೀಡಿದ ಬಳಿಕ ಸೇವ್ ಮಾಡಿ
ನಿಮ್ಮ ಅರ್ಜಿಯ ಬಗ್ಗೆ ಅಪ್ಡೇಟ್ ಪಡೆದುಕೊಳ್ಳಲು ಮನೆಯಲ್ಲೇ ಕೂತು ನೀವು ರಿಜಿಸ್ಟರ್ ಮೊಬೈಲ್ ನಂಬರ್ನಿಂದ ಸಹಾಯವಾಣಿ ಸಂಖ್ಯೆ 011-24300606 ಗೆ ಕರೆ ಮಾಡಿ.
ಈ ಯೋಜನೆಗಾಗಿ ನೋಂದಾವಣಿ ಮಾಡಿಕೊಳ್ಳೋದು ತುಂಬಾನೇ ಸುಲಭ. ಮನೆಯಲ್ಲೇ ಕೂತು ಆನ್ಲೈನ್ನಲ್ಲೇ ನೀವು ಈ ಎಲ್ಲಾ ಪ್ರಕ್ರಿಯೆಗಳನ್ನ ಪೂರೈಸಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದ ಪಂಚಾಯತ್ಗೆ ಭೇಟಿ ನೀಡಿ ಕೂಡ ಈ ಕಾರ್ಯವನ್ನ ಮಾಡಿಸಿಕೊಳ್ಳಬಹುದು.