alex Certify ಆನ್ಲೈನ್ ಮೂಲಕ ‘ಆಧಾರ್’ ಪಿವಿಸಿ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್ಲೈನ್ ಮೂಲಕ ‘ಆಧಾರ್’ ಪಿವಿಸಿ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ಯುಐಡಿಎಐ ಆಧಾರ್​ ಕಾರ್ಡ್​ನ ಹೊಸ ರೂಪವಾದ ಆಧಾರ್​ ಪಿವಿಸಿ ಕಾರ್ಡ್​ನ್ನ ಪರಿಚಯಿಸಿದೆ. ಈ ಹೊಸ ಮಾದರಿಯ ಆಧಾರ್​ ಕಾರ್ಡ್ ಥೇಟ್​​​ ಎಟಿಎಂನಂತೆಯೇ ಇರಲಿದೆ. ಹೊಸ ರೂಪದ ಈ ಕಾರ್ಡ್​ನಲ್ಲಿ ಡಿಜಿಟಲ್​ ಸೈನ್​​ ಹಾಗೂ ಕ್ಯೂ ಆರ್​ ಕೋಡ್​​, ಫೋಟೋ ಹಾಗೂ ವ್ಯಕ್ತಿಯ ವಿವರಗಳನ್ನ ಹೊಂದಿರಲಿದೆ.

ಯುಐಡಿಎಐ ಅಧಿಕೃತ ವೆಬ್​ಸೈಟ್​ನಿಂದ ಈ ಹೊಸ ಮಾದರಿಯ ಆಧಾರ್​ ಕಾರ್ಡ್​ಗಳನ್ನ ಪಡೆಯಬಹುದಾಗಿದೆ. ಕುಟುಂಬದ ಯಾವುದೇ ಸದಸ್ಯ ಸೂಕ್ತ ಆಧಾರ್​ ನಂಬರ್​ ನಮೂದಿಸುವ ಮೂಲಕ ಮನೆಯ ಎಲ್ಲ ಸದಸ್ಯರಿಗೆ ಆಧಾರ್​ ಕಾರ್ಡ್​ ಆರ್ಡರ್​ ಮಾಡಬಹುದಾಗಿದೆ.

ಈ ಎಟಿಎಂ ಮಾದರಿಯ ಆಧಾರ್​ ಕಾರ್ಡ್​ಗಳನ್ನ ಪಡೆಯಲು ಮೊದಲಿಗೆ https://uidai.gov.in/ ವೆಬ್​​ಸೈಟ್​ಗೆ ಲಾಗ್​ ಇನ್​ ಆಗಿ. ಬಳಿಕ ಆಧಾರ್​ ಕಾರ್ಡ್​ ವಿಭಾಗದಲ್ಲಿ ನಿಮ್ಮ 12 ಸಂಖ್ಯೆ ಆಧಾರ್​ ನಂಬರ್​ನ್ನ ನಮೂದಿಸಿ. 16 ಸಂಖ್ಯೆಯ ವಿಐಡಿ ನಂಬರ್​​ ಅಥವಾ 28 ಸಂಖ್ಯೆಯ ಇಐಡಿ ನಂಬರ್​ ನಮೂದಿಸಿ. ಬಳಿಕ ನಿಮ್ಮ ಮೊಬೈಲ್​ಗೆ ಬರುವ ಒಟಿಪಿ ನಮೂದಿಸಿ. ಬಳಿಕ 50 ರೂಪಾಯಿ ಪಾವತಿ ಮಾಡುವ ಮೂಲಕ ಈ ಹೊಸ ಮಾದರಿಯ ಆಧಾರ್​ ಕಾರ್ಡ್​ನ್ನ ಪಡೆಯಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...