ಯುಐಡಿಎಐ ಆಧಾರ್ ಕಾರ್ಡ್ನ ಹೊಸ ರೂಪವಾದ ಆಧಾರ್ ಪಿವಿಸಿ ಕಾರ್ಡ್ನ್ನ ಪರಿಚಯಿಸಿದೆ. ಈ ಹೊಸ ಮಾದರಿಯ ಆಧಾರ್ ಕಾರ್ಡ್ ಥೇಟ್ ಎಟಿಎಂನಂತೆಯೇ ಇರಲಿದೆ. ಹೊಸ ರೂಪದ ಈ ಕಾರ್ಡ್ನಲ್ಲಿ ಡಿಜಿಟಲ್ ಸೈನ್ ಹಾಗೂ ಕ್ಯೂ ಆರ್ ಕೋಡ್, ಫೋಟೋ ಹಾಗೂ ವ್ಯಕ್ತಿಯ ವಿವರಗಳನ್ನ ಹೊಂದಿರಲಿದೆ.
ಯುಐಡಿಎಐ ಅಧಿಕೃತ ವೆಬ್ಸೈಟ್ನಿಂದ ಈ ಹೊಸ ಮಾದರಿಯ ಆಧಾರ್ ಕಾರ್ಡ್ಗಳನ್ನ ಪಡೆಯಬಹುದಾಗಿದೆ. ಕುಟುಂಬದ ಯಾವುದೇ ಸದಸ್ಯ ಸೂಕ್ತ ಆಧಾರ್ ನಂಬರ್ ನಮೂದಿಸುವ ಮೂಲಕ ಮನೆಯ ಎಲ್ಲ ಸದಸ್ಯರಿಗೆ ಆಧಾರ್ ಕಾರ್ಡ್ ಆರ್ಡರ್ ಮಾಡಬಹುದಾಗಿದೆ.
ಈ ಎಟಿಎಂ ಮಾದರಿಯ ಆಧಾರ್ ಕಾರ್ಡ್ಗಳನ್ನ ಪಡೆಯಲು ಮೊದಲಿಗೆ https://uidai.gov.in/ ವೆಬ್ಸೈಟ್ಗೆ ಲಾಗ್ ಇನ್ ಆಗಿ. ಬಳಿಕ ಆಧಾರ್ ಕಾರ್ಡ್ ವಿಭಾಗದಲ್ಲಿ ನಿಮ್ಮ 12 ಸಂಖ್ಯೆ ಆಧಾರ್ ನಂಬರ್ನ್ನ ನಮೂದಿಸಿ. 16 ಸಂಖ್ಯೆಯ ವಿಐಡಿ ನಂಬರ್ ಅಥವಾ 28 ಸಂಖ್ಯೆಯ ಇಐಡಿ ನಂಬರ್ ನಮೂದಿಸಿ. ಬಳಿಕ ನಿಮ್ಮ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ. ಬಳಿಕ 50 ರೂಪಾಯಿ ಪಾವತಿ ಮಾಡುವ ಮೂಲಕ ಈ ಹೊಸ ಮಾದರಿಯ ಆಧಾರ್ ಕಾರ್ಡ್ನ್ನ ಪಡೆಯಬಹುದಾಗಿದೆ.