ಮಕ್ಕಳ ಆನ್ಲೈನ್ ಖಾತೆಯನ್ನು ತೆರೆಯಲು ಬಯಸಿದ್ದರೆ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರಾಪ್ತ ಮಕ್ಕಳಿಗಾಗಿ ಆನ್ಲೈನ್ ಖಾತೆ ತೆರೆಯುವ ಅವಕಾಶ ನೀಡ್ತಿದೆ. ಪೆಹ್ಲಾ ಕದಮ್ ಮತ್ತು ಪೆಹ್ಲಿ ಉಡಾನ್ ಹೆಸರಿನ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ಎಸ್ಬಿಐ ಆನ್ಲೈನ್ನಲ್ಲಿ ನೀಡ್ತಿದೆ. ಈ ಖಾತೆಗಳಲ್ಲಿ ಮಕ್ಕಳಿಗೆ ಹಣವನ್ನು ಹಿಂಪಡೆಯುವ ಮಿತಿಯನ್ನು ಸಹ ನಿಗದಿಪಡಿಸಲಾಗಿದೆ.
ಪೆಹ್ಲಾ ಕದಮ್ ಖಾತೆಯನ್ನು ಯಾವುದೇ ವಯಸ್ಸಿನ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ತೆರೆಯಬಹುದು. ಮಕ್ಕಳೊಂದಿಗೆ ಪೋಷಕರು ಜಂಟಿಯಾಗಿಯೂ ಖಾತೆ ತೆರೆಯಬಹುದು. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಇದ್ರಲ್ಲಿದೆ.
ಎಲ್ಲ ರೀತಿಯ ಬಿಲ್ ಪಾವತಿ ಮಾಡಬಹುದು. ದೈನಂದಿನ ವಹಿವಾಟಿನ ಮಿತಿ 2 ಸಾವಿರ ರೂಪಾಯಿ. ಮಕ್ಕಳ ಹೆಸರಿನಲ್ಲಿ ಖಾತೆ ತೆರೆದಾಗ ಎಟಿಎಂ – ಡೆಬಿಟ್ ಕಾರ್ಡ್ ಸೌಲಭ್ಯವನ್ನೂ ನೀಡಲಾಗುತ್ತದೆ. ಅಪ್ರಾಪ್ತರು ಅಥವಾ ಪಾಲಕರ ಹೆಸರಿನಲ್ಲಿ ಕಾರ್ಡ್ ನೀಡಲಾಗುವುದು. ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಪ್ರತಿ ದಿನದ ಮಿತಿ 500 ರೂಪಾಯಿ. ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ಕೂಡ ಲಭ್ಯವಿದೆ.
PNB ಗ್ರಾಹಕರಿಗೆ ಸಿಹಿ ಸುದ್ದಿ: ಬ್ಯಾಂಕ್ ನೀಡ್ತಿದೆ ಪ್ರತಿ ತಿಂಗಳು 30 ಸಾವಿರ ಗಳಿಸುವ ಅವಕಾಶ
ಎಸ್ಬಿಐನ ಇನ್ನೊಂದು ಯೋಜನೆ ಹೆಸರು ಪೆಹ್ಲಿ ಉಡಾನ್. 10 ವರ್ಷ ಮೇಲ್ಪಟ್ಟ ಮಕ್ಕಳು ಸೈನ್ ಮಾಡಬಹುದು. ಪೆಹ್ಲಾ ಉಡಾನ್ ರೀತಿಯಲ್ಲಿಯೇ ಖಾತೆ ತೆರೆಯಬಹುದು. ಖಾತೆ ಸಂಪೂರ್ಣ ಅಪ್ರಾಪ್ತರ ಹೆಸರಿನಲ್ಲಿಯೇ ಇರುತ್ತದೆ. ಅವರೇ ಇದನ್ನು ಆಪರೇಟ್ ಮಾಡಬಹುದು.
ಎಟಿಎಂ-ಡೆಬಿಟ್ ಕಾರ್ಡ್ ಸೌಲಭ್ಯವೂ ಇದ್ದು, ಪ್ರತಿದಿನ 5000 ರೂಪಾಯಿವರೆಗೆ ಹಣವನ್ನು ಹಿಂಪಡೆಯಬಹುದು. ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವೂ ಲಭ್ಯವಿದೆ. ಪ್ರತಿದಿನ 2000 ರೂಪಾಯಿಗಳನ್ನು ವರ್ಗಾಯಿಸಬಹುದಾಗಿದೆ. ಇದರಲ್ಲಿ, ಚೆಕ್ ಬುಕ್ ಸೌಲಭ್ಯ ಲಭ್ಯವಿದೆ. sbi.co.in ವೆಬ್ಸೈಟ್ ನಲ್ಲಿ ಅಪ್ರಾಪ್ತರ ಹೆಸರಿನಲ್ಲಿ ಖಾತೆ ತೆರೆಯಬಹುದು.