ಭಾರತದ ಪ್ರಮುಖ ಡಿಟಿಹೆಚ್ ಪ್ರೊವೈಡರ್ಗಳಲ್ಲಿ ಏರ್ಟೆಲ್ ಡಿಜಿಟಲ್ ಟಿವಿ ಕೂಡ ಒಂದು. ಏರ್ಟೆಲ್ ಅಪ್ಲಿಕೇಶನ್ ಇಲ್ಲವೇ ವೆಬ್ಸೈಟ್ಗಳ ಮೂಲಕ ಗ್ರಾಹಕರು ತಮ್ಮ ಚಾನೆಲ್ ಪ್ಯಾಕೇಜ್ಗಳನ್ನ ಬದಲಾಯಿಸಬಹುದಾಗಿದೆ. ಏರ್ಟೆಲ್ ಡಿಜಿಟಲ್ ಟಿವಿ ಪ್ಯಾಕೇಜ್ಗಳನ್ನ ಬದಲಾವಣೆ ಮಾಡೋಕೆ ಇಲ್ಲಿದೆ ಪ್ರಮುಖ ಮಾಹಿತಿ.
ಚಿನ್ನದ ಬಾಂಡ್ ಖರೀದಿದಾರರಿಗೆ ಗುಡ್ ನ್ಯೂಸ್: ಪ್ರತಿ ಗ್ರಾಂಗೆ 50 ರೂ. ವಿನಾಯಿತಿ
ಏರ್ಟೆಲ್ ಡಿಜಿಟಲ್ ಟಿವಿ ಪ್ಯಾಕೇಜ್ ಬದಲಾವಣೆಗೆ ಮೊದಲು ವೆಬ್ಸೈಟ್ಗೆ ಲಾಗಿನ್ ಆಗಿ. ನೀವು ಪಾಸ್ವರ್ಡ್ನ್ನು ಹಾಕಿದ ಬಳಿಕ ನಿಮ್ಮ ನೋಂದಾಯಿಸಿದ ಮೊಬೈಲ್ಗೆ 4 ಸಂಖ್ಯೆಗಳ ಓಟಿಪಿ ಬರಲಿದೆ. ಈಗ ಡೆಸ್ಕ್ಟಾಪ್ ಪರದೆಯ ಎಡಭಾಗದಲ್ಲಿ ಡಿಜಿಟಲ್ ಟಿವಿ ಸೆಕ್ಷನ್ನ್ನು ಆಯ್ಕೆ ಮಾಡಿ. ಕೆಳಗಡೆ ಸ್ಕ್ರೋಲ್ ಮಾಡಿದಾಗ ನಿಮಗೆ ಮ್ಯಾನೇಜ್ ಟಿವಿ ಚಾನೆಲ್ ಆಯ್ಕೆ ಸಿಗಲಿದೆ. ಇಲ್ಲಿ ನಿಮಗೆ ಏರ್ಟೆಲ್ ಡಿಜಿಟಲ್ ಟಿವಿಯ ಎಲ್ಲಾ ಪ್ಯಾಕೇಜ್ಗಳು ಕಾಣಲಿದೆ.
ಪ್ರಸ್ತುತ ಇರುವ ಚಾನೆಲ್ ಪ್ಯಾಕೇಜ್ನ ಕೆಳಗಡೆ ಇರುವ ಎಡಿಟ್ ಕರೆಂಟ್ ಪ್ಲಾನ್ ಆಯ್ಕೆ ಒತ್ತಿರಿ. ಈಗ ಏರ್ಟೆಲ್ ನಿಮಗೆ ಹೊಸ ಪ್ಯಾಕೇಜ್ಗಳನ್ನ ತೋರಿಸಲಿದೆ. ಇಲ್ಲಿ ನಿಮಗೆ ಬೇಕಾದ ಪ್ಯಾಕೇಜ್ನ್ನು ಆಯ್ಕೆ ಮಾಡಿ. ಹಾಗೂ ನೀವು ಆಯ್ಕೆ ಮಾಡಿದ ಪ್ಯಾಕೇಜ್ಗೆ ಹಣ ಪಾವತಿ ಮಾಡಿ. ಅಲ್ಲದೇ ಪ್ಯಾಕೇಜ್ ಬಗ್ಗೆ ಯಾರೊಂದಿಗಾದರೂ ಚರ್ಚೆ ಮಾಡಿ ಬಳಿಕ ಅದನ್ನ ಪಡೆಯುವ ಪ್ಲಾನ್ನಲ್ಲಿ ನೀವಿದ್ದರೆ ನಿಮಗೆ ಪ್ಯಾಕೇಜ್ಗಳನ್ನ ಸೇವ್ ಕೂಡ ಮಾಡುವ ಆಯ್ಕೆ ಅಲ್ಲೇ ಇರಲಿದೆ.