alex Certify ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಈಗಿನ ಕಾಲದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದ್ರುನೂ ಆಧಾರ್​ ಕಾರ್ಡ್​ ಬೇಕೆ ಬೇಕು. ಈ ಆಧಾರ್​​​ ಕಾರ್ಡ್​ನಲ್ಲಿರುವ ಮಾಹಿತಿಯನ್ನ ಬದಲಾವಣೆ ಮಾಡೋದು ಅಂದ್ರೆ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡಬೇಕಿತ್ತು.

ಹೀಗಾಗಿ ಅನೇಕರು ಆನ್ ‌ಲೈನ್‌ನಲ್ಲಿ ಈ ಬದಲಾವಣೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಇದೀಗ ಈ ಮನವಿಯನ್ನ ಪರಿಗಣಿಸಿರುವ ಯುಐಡಿಎಐ ತನ್ನ ವೆಬ್​ಸೈಟ್​​ನಲ್ಲೇ ಆಧಾರ್​​ ಬಳಕೆದಾರನ ವಿಳಾಸವನ್ನ ಬದಲಾವಣೆ ಮಾಡಲು ಅವಕಾಶ ನೀಡಿದೆ.

ಯುಐಡಿಎಐನ ಅಧಿಕೃತ ವೆಬ್​ಸೈಟ್​ ಖಾತೆಯಾದ uidai.gov.in ಅಥವಾ ಮೊಬೈಲ್​ ಅಪ್ಲಿಕೇಶನ್​ ಆದ ಎಂ ಆಧಾರ್​ನಲ್ಲೂ ನೀವು ವಿಳಾಸವನ್ನ ಬದಲಾವಣೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾರಿಗೋದು ಇಷ್ಟೇ.

ಯುಐಡಿಎಐ ವೆಬ್​ಸೈಟ್​ನಲ್ಲಿ ವಿಳಾಸ ಬದಲಾವಣೆ (update your address online) ಆಯ್ಕೆಯನ್ನ ಕ್ಲಿಕ್​ ಮಾಡಿ. ಇದರಲ್ಲಿ ಅಪ್​​ಡೇಟ್​ ಆಧಾರ್​ ಎಂಬ ಆಪ್ಶನ್​ನ್ನು ಆಯ್ಕೆ ಮಾಡಿ.

ಇದಾದ ಬಳಿಕ ನೀವು ಆಧಾರ್​ ಕಾರ್ಡ್​ನಲ್ಲಿ ನೀವು ನೋಂದಾಯಿಸಿರುವ ಮೊಬೈಲ್​ ನಂಬರ್​ನ್ನು ಟೈಪ್​ ಮಾಡಿ. ರಿಜಿಸ್ಟರ್​ ಮೊಬೈಲ್​​ ನಂಬರ್​ಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ನೀವು ನಿಮ್ಮ ಸರಿಯಾದ ವಿಳಾಸವನ್ನು ನಮೂದಿಸಬಹುದಾಗಿದೆ. ನಮೂದಿಸಿದ ವಿಳಾಸಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಯ ಸ್ಕ್ಯಾನ್‌ ಪ್ರತಿಯನ್ನು ಅಪ್‌ ಲೋಡ್‌ ಮಾಡಿದ ಬಳಿಕ URN ನಂಬರ್‌ ಬರುತ್ತದೆ. ಇದು ಅಪ್‌ ಡೇಟ್‌ ಮಾಡಿದ ಮಾಹಿತಿಯನ್ನು ಟ್ರಾಕ್‌ ಮಾಡಲು ಬಳಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...