ಈಗಿನ ಕಾಲದಲ್ಲಿ ಯಾವುದೇ ಸರ್ಕಾರಿ ಕೆಲಸ ಆಗಬೇಕು ಅಂದ್ರುನೂ ಆಧಾರ್ ಕಾರ್ಡ್ ಬೇಕೆ ಬೇಕು. ಈ ಆಧಾರ್ ಕಾರ್ಡ್ನಲ್ಲಿರುವ ಮಾಹಿತಿಯನ್ನ ಬದಲಾವಣೆ ಮಾಡೋದು ಅಂದ್ರೆ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡಬೇಕಿತ್ತು.
ಹೀಗಾಗಿ ಅನೇಕರು ಆನ್ ಲೈನ್‌ನಲ್ಲಿ ಈ ಬದಲಾವಣೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಇದೀಗ ಈ ಮನವಿಯನ್ನ ಪರಿಗಣಿಸಿರುವ ಯುಐಡಿಎಐ ತನ್ನ ವೆಬ್ಸೈಟ್ನಲ್ಲೇ ಆಧಾರ್ ಬಳಕೆದಾರನ ವಿಳಾಸವನ್ನ ಬದಲಾವಣೆ ಮಾಡಲು ಅವಕಾಶ ನೀಡಿದೆ.
ಯುಐಡಿಎಐನ ಅಧಿಕೃತ ವೆಬ್ಸೈಟ್ ಖಾತೆಯಾದ uidai.gov.in ಅಥವಾ ಮೊಬೈಲ್ ಅಪ್ಲಿಕೇಶನ್ ಆದ ಎಂ ಆಧಾರ್ನಲ್ಲೂ ನೀವು ವಿಳಾಸವನ್ನ ಬದಲಾವಣೆ ಮಾಡಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾರಿಗೋದು ಇಷ್ಟೇ.
ಯುಐಡಿಎಐ ವೆಬ್ಸೈಟ್ನಲ್ಲಿ ವಿಳಾಸ ಬದಲಾವಣೆ (update your address online) ಆಯ್ಕೆಯನ್ನ ಕ್ಲಿಕ್ ಮಾಡಿ. ಇದರಲ್ಲಿ ಅಪ್ಡೇಟ್ ಆಧಾರ್ ಎಂಬ ಆಪ್ಶನ್ನ್ನು ಆಯ್ಕೆ ಮಾಡಿ.
ಇದಾದ ಬಳಿಕ ನೀವು ಆಧಾರ್ ಕಾರ್ಡ್ನಲ್ಲಿ ನೀವು ನೋಂದಾಯಿಸಿರುವ ಮೊಬೈಲ್ ನಂಬರ್ನ್ನು ಟೈಪ್ ಮಾಡಿ. ರಿಜಿಸ್ಟರ್ ಮೊಬೈಲ್ ನಂಬರ್ಗೆ ಬರುವ ಒಟಿಪಿ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ನೀವು ನಿಮ್ಮ ಸರಿಯಾದ ವಿಳಾಸವನ್ನು ನಮೂದಿಸಬಹುದಾಗಿದೆ. ನಮೂದಿಸಿದ ವಿಳಾಸಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಯ ಸ್ಕ್ಯಾನ್ ಪ್ರತಿಯನ್ನು ಅಪ್ ಲೋಡ್ ಮಾಡಿದ ಬಳಿಕ URN ನಂಬರ್ ಬರುತ್ತದೆ. ಇದು ಅಪ್ ಡೇಟ್ ಮಾಡಿದ ಮಾಹಿತಿಯನ್ನು ಟ್ರಾಕ್ ಮಾಡಲು ಬಳಸಬಹುದಾಗಿದೆ.