ಸರ್ಕಾರಿ ಕೆಲಸ ಸೇರಿದಂತೆ ಗುರುತಿಗೆ ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆ. ಕೈಗೆಟುಕುವ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಲು ನೆರವಾಗುತ್ತದೆ. ಕುಟುಂಬದ ಎಲ್ಲ ಸದಸ್ಯರ ವಿವರಗಳನ್ನು ಅದರಲ್ಲಿ ದಾಖಲಿಸಬೇಕು. ಕುಟುಂಬದಲ್ಲಿ ಹೊಸ ಮಗು ಜನಿಸಿದರೆ ಅಥವಾ ಸೊಸೆಯ ಆಗಮನವಾದ್ರೆ ಅವರ ಹೆಸರನ್ನು ಸೇರಿಸಬೇಕಾಗುತ್ತದೆ. ಇದಕ್ಕಾಗಿ ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
ಹೆಸರು, ವಿಳಾಸ ಸೇರಿದಂತೆ ಇತರ ಕೆಲವು ವಿವರಗಳು ರೇಷನ್ ಕಾರ್ಡ್ ನಲ್ಲಿ ತಪ್ಪಾಗಿದ್ದರೆ ಅದನ್ನೂ ಸರಿಪಡಿಸಬಹುದು. ಮನೆಯಲ್ಲಿಯೇ ಆನ್ಲೈನ್ ನಲ್ಲಿ ಈ ತಿದ್ದುಪಡಿ ಮಾಡಬಹುದು. ಪಡಿತರ ಕಾರ್ಡ್ಗೆ ಹೊಸ ಸದಸ್ಯರ ಹೆಸರನ್ನು ಸೇರಿಸಲು ಆಧಾರ್ ಕಾರ್ಡ್ ನಲ್ಲಿ ಮೊದಲು ತಿದ್ದುಪಡಿ ಮಾಡಬೇಕಾಗುತ್ತದೆ. ಮದುವೆಯ ನಂತರ ಉಪನಾಮವನ್ನು ಬದಲಾಯಿಸಬೇಕು. ತಂದೆ ಹೆಸರಿನ ಬದಲು ಗಂಡನ ಹೆಸರು ಹಾಕಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ನವೀಕರಿಸಬೇಕಾಗುತ್ತದೆ. ನಂತ್ರ ಹೊಸ ಆಧಾರ್ ಕಾರ್ಡನ್ನು ಆಹಾರ ಇಲಾಖೆ ಅಧಿಕಾರಿಗೆ ನೀಡಬೇಕಾಗುತ್ತದೆ. ಹಾಗೆ ಹಳೆಯ ಪಡಿತರ ಚೀಟಿಯಿಂದ ಹೆಸರನ್ನು ತೆಗೆದುಹಾಕಿದ ನಂತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕು. ಇವೆಲ್ಲಕ್ಕಿಂತ ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು.
ಪಡಿತರ ಕಾರ್ಡ್ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡದಿದ್ದರೆ, ಅದನ್ನು ನೋಂದಾಯಿಸಲು https://nfs.delhi.gov.in/Citizen/UpdateMobileNumber.aspx ಗೆ ಭೇಟಿ ನೀಡಬೇಕು. ಇಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ. ಇಲ್ಲಿ ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಎರಡನೇ ಕಾಲಂನಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ಬರೆಯಬೇಕು. ಮೂರನೇ ಕಾಲಂನಲ್ಲಿ ಮನೆಯ ಮುಖ್ಯಸ್ಥರ ಹೆಸರನ್ನು ಭರ್ತಿ ಮಾಡಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು.