alex Certify ಮನೆ ಖರೀದಿದಾರರಿಗೆ ಗುಡ್ ನ್ಯೂಸ್: ಮುದ್ರಾಂಕ ಶುಲ್ಕ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಖರೀದಿದಾರರಿಗೆ ಗುಡ್ ನ್ಯೂಸ್: ಮುದ್ರಾಂಕ ಶುಲ್ಕ ಇಳಿಕೆ

ಬೆಂಗಳೂರು: ನೋಂದಣಿ ಮುದ್ರಾಂಕ ಶುಲ್ಕ ಕಡಿತಕ್ಕೆ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ. ಶೇಕಡ 5 ರಷ್ಟು ಇದ್ದ ಮುದ್ರಾಂಕ ಶುಲ್ಕವನ್ನು ಶೇಕಡ 3 ಕ್ಕೆ ಇಳಿಕೆ ಮಾಡಲಾಗಿದೆ.

ಮನೆ ನೋಂದಣಿಗೆ ಇನ್ನು ಮುಂದೆ ಶೇಕಡ 3 ರಷ್ಟು ಮುದ್ರಾಂಕ ಶುಲ್ಕ ಪಾವತಿಸಬೇಕಿದೆ. ಈ ಮೊದಲು ಶೇಕಡಾ 5 ರಷ್ಟು ಮುದ್ರಾಂಕ ಶುಲ್ಕವಿತ್ತು.

ನಿವೇಶನಕ್ಕೆ ಮುದ್ರಾಂಕ ಶುಲ್ಕ ಕಡಿಮೆ ಮಾಡಲು ವಿಧಾನಸಭೆಯಲ್ಲಿ ಶಾಸಕ ಸಾ.ರಾ. ಮಹೇಶ್ ಮನವಿ ಮಾಡಿದ್ದಾರೆ.

ಬಿಲ್ಡರ್ ಗಳಿಗೆ ಸಹಾಯ ಮಾಡಲು ಈ ವಿಧೇಯಕ ತಂದಿದ್ದೀರಿ. ನಿಜವಾಗಲೂ ಬಡವರಿಗೆ ಸಹಾಯ ಮಾಡುವುದಿದ್ದರೆ ನಿವೇಶನಗಳಿಗೆ ರಿಯಾಯಿತಿ ನೀಡಬೇಕು ಎಂದು ಡಿಕೆಶಿ ಹೇಳಿದ್ದಾರೆ.

ಶೇಕಡ 3 ರ ಬದಲು ಶೇಕಡ 1 ರಷ್ಟು ಶುಲ್ಕ ನಿಗದಿ ಮಾಡಿ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ಚರ್ಚೆಯ ಬಳಿಕ ಸದನದಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...