ಕೊರೊನಾದ ಜೊತೆ ಹೊಂದಿಕೊಂಡು ಬದುಕೋಕೆ ಮುಂದಾಗಿರೋ ಹಾಂಕಾಂಗ್ ಸರ್ಕಾರ ಸಾಮಾಜಿಕ ಅಂತರದ ಜೊತೆಗೆ ಹೊರಾಂಗಣ ಮನರಂಜನಾ ಉದ್ಯಾನವನ್ನ ಸಾರ್ವಜನಿಕರ ಬಳಕೆ ಮುಕ್ತವಾಗಿಸಿದೆ.
ದಿ ಗ್ರೌಂಡ್ಸ್ ಎಂಬ ಹೆಸರಿನ ಉದ್ಯಾನವನದಲ್ಲಿ 1.5 ಮೀಟರ್ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಬರುವ ಸಾರ್ವಜನಿಕರು ಲೈವ್ ಪ್ರದರ್ಶನ ಹಾಗೂ ಹೊರಾಂಗಣ ಸಿನಿಮಾ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನ ಆನಂದಿಸಬಹುದಾಗಿದೆ.
ಇದು ಬಹಳ ಕಷ್ಟದ ವರ್ಷವಾಗಿದೆ. ಆದರೂ ಕೂಡ ಹಾಂಕಾಂಗ್ ಸರ್ಕಾರ ಸ್ನೇಹಿತರ ಜೊತೆ ಸಮಯ ಕಳೆಯಲು ಇದೊಂದು ಅವಕಾಶ ನೀಡಿದ್ದಕ್ಕೆ ಖುಷಿ ಇದೆ ಅಂತಾ ವೀಕ್ಷಕ ಬೆತ್ ಹ್ಯಾಕ್ನಿ ಹೇಳಿದ್ರು.