ಫ್ಯುಯಲ್ ಪಂಪ್ಗಳನ್ನ ಮರುಜೋಡಿಸುವ ಸಲುವಾಗಿ 761000 ವಾಹನಗಳನ್ನ ರಿಕಾಲ್ ಮಾಡೋದಾಗಿ ಹೋಂಡಾ ಮೋಟಾರ್ಸ್ ಮಂಗಳವಾರ ಹೇಳಿಕೆ ನೀಡಿದೆ. ವಾಹನಗಳ ಇಂಜಿನ್ಗಳಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಹೋಂಡಾ ಈ ಕ್ರಮ ಕೈಗೊಂಡಿದೆ.
ಈ ರಿಕಾಲ್ನಲ್ಲಿ 628000 ಅಮೆರಿಕ ವಾಹನಗಳೂ ಸೇರಿವೆ. ಇದರಲ್ಲಿ 2018 ರಿಂದ 2020ರ ಮಾಡೆಲ್ಗಳನ್ನ ಕವರ್ ಮಾಡುವ ಇರಾದೆಯನ್ನ ಹೋಂಡಾ ಕಂಪನಿ ಹೊಂದಿದೆ. ಹೋಂಡಾ ಕಂಪನಿ ಇಲ್ಲಿಯವರೆಗೆ ತನ್ನ ಗ್ರಾಹಕರಿಂದ ಇಂಜಿನ್ ಸಂಬಂಧಿ ದೂರುಗಳನ್ನ ಸ್ವೀಕರಿಸಿಲ್ಲ.
ಈ ರಿಕಾಲ್ನಲ್ಲಿ ಅಕಾರ್ಡ್, ಸಿವಿಕ್, ಸಿಆರ್-ವಿ, ಫಿಟ್, ಪೈಲಟ್, ರಿಡ್ಜೆಲೈನ್, ಎಂಡಿಎಕ್ಸ್, ಆರ್ಡಿಎಕ್ಸ್ ಮತ್ತು ಟಿಎಲ್ಎಕ್ಸ್ ವಾಹನಗಳು ಸೇರಿವೆ.