ತನ್ನ ಪ್ರೀಮಿಯಂ ಬೈಕ್ಗಳ ಬಿಗ್ವಿಂಗ್ ಶೋರೂಂ ಮೂಲಕ CBR300R ಬೈಕುಗಳ ಮಾರಾಟ ಆರಂಭಿಸಿರುವ ಹೋಂಡಾ, ಇದರ ಬೆನ್ನಿಗೇ 2022 ಹೋಂಡಾ CBR650R ಮಾಡೆಲ್ ಅನ್ನೂ ಸಹ ಲಾಂಚ್ ಮಾಡಿದೆ.
ಮಧ್ಯಮಗಾತ್ರದ ಸ್ಪೋರ್ಟ್ ವರ್ಗದ ಗ್ರಾಹಕರಿಗೆ ಈ ಬೈಕ್ ಅಭಿವೃದ್ಧಿ ಮಾಡಲಾಗಿದೆ. ಇದೇ ವೇಳೆ ತನ್ನ ಹೊಸ ಬೈಕ್ಗಳ ಲಾಂಚ್ ಆದ ಬೆನ್ನಿಗೇ ಅವುಗಳಿಗೆ ಬುಕಿಂಗ್ ಗವಾಕ್ಷಿಯನ್ನೂ ಹೋಂಡಾ ತೆರೆದಿದೆ.
ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ಈ ಬಾರಿ ವಿಶೇಷತೆ ಏನು ಗೊತ್ತಾ…?
2022 CBR650R ಬೈಕ್ನಲ್ಲಿ ಕಿತ್ತಳೆ ಬಣ್ಣದ ಹೊಸ ಹೈಲೈಟ್ಗಳು ಇದ್ದು, ಸ್ಪೋರ್ಟಿ ಗ್ರಾಫಿಕ್ಸ್ಗಳಿಂದ ಕಂಗೊಳಿಸುತ್ತಿದೆ. ಮೇಲ್ಮುಖ ಹಾಗೂ ಕೆಳಮುಖದ ಫೇರಿಂಗ್ ಗಳಿಂದ ಬೈಕ್ಗೆ ಆಜಾನುಬಾಹುವಿನ ಲುಕ್ ಸಿಕ್ಕಿದೆ.
649ಸಿಸಿ, ಡೊಓಎಚ್ಸಿ 16-ವಾಲ್ವ್, ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿರುವ CBR650R 12,000 ಆರ್ಪಿಎಂನಲ್ಲಿ 64ಕಿವ್ಯಾಗಳಷ್ಟು ಗರಿಷ್ಠ ಶಕ್ತಿ ಉತ್ಪಾದಿಸಬಲ್ಲದು. 8,500 ಆರ್ಪಿಎಂನಲ್ಲಿ ಗರಿಷ್ಠ 57.5 ಎನ್ಎಂ ಟಾರ್ಕ್ ಸಹ ಉತ್ಪಾದನೆ ಮಾಡುತ್ತದೆ ಈ ಬೈಕ್.
9,35,427 ರೂ.ಗಳು (ಎಕ್ಸ್ಶೋರೂಂ ಬೆಲೆ, ಗುರುಗ್ರಾಮ) ಬೆಲೆ ಇರುವ ಈ ಬೈಕ್ನ ಬುಕಿಂಗ್ ಇಂದಿನಿಂದಲೇ ಆರಂಭಗೊಂಡಿದೆ.