alex Certify ಕೇಂದ್ರದಿಂದ ಗುಡ್ ನ್ಯೂಸ್: ಅಗತ್ಯ ಔಷಧ ಪಟ್ಟಿಗೆ ಹೃದಯ ಸ್ಟೆಂಟ್ ಸೇರ್ಪಡೆ; ದರ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರದಿಂದ ಗುಡ್ ನ್ಯೂಸ್: ಅಗತ್ಯ ಔಷಧ ಪಟ್ಟಿಗೆ ಹೃದಯ ಸ್ಟೆಂಟ್ ಸೇರ್ಪಡೆ; ದರ ಇಳಿಕೆ

ನವದೆಹಲಿ: ಅಗತ್ಯ ಔಷಧಗಳ ಪಟ್ಟಿಗೆ ಹೃದಯದ ರಕ್ತನಾಳಕ್ಕೆ ಅಳವಡಿಕೆ ಮಾಡುವಾಗ ಕೊರೊನರಿ ಸ್ಟೆಂಟ್ ಗಳನ್ನು ಕೇಂದ್ರ ಸರ್ಕಾರ ಸೇರ್ಪಡೆ ಮಾಡಿದ್ದು, ಈ ಸ್ಟೆಂಟ್ ಗಳ ಬೆಲೆ ಇಳಿಕೆಯಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಅಗತ್ಯ ಔಷಧಪಟ್ಟಿಗೆ ಕೊರೊನರಿ ಸ್ಟೆಂಟ್ ಗಳನ್ನು ಸೇರ್ಪಡೆ ಮಾಡಿದ್ದು, ಜನರಿಗೆ ಕಡಿಮೆ ದರದಲ್ಲಿ ಸ್ಟೆಂಟ್ ಲಭ್ಯವಾಗಲಿದೆ. ಸೆಪ್ಟಂಬರ್ 13ರಂದು ಅಗತ್ಯ ಔಷಧಗಳ ಪಟ್ಟಿಯಲ್ಲಿ ಕ್ಯಾನ್ಸರ್ ಔಷಧಿ, ಆಂಟಿ ಬಯಾಟಿಕ್ ಮತ್ತು ಕೆಲವು ಲಸಿಕೆಗಳನ್ನು ಸೇರಿ 34 ಔಷಧಗಳನ್ನು ಸೇರ್ಪಡೆ ಮಾಡಲಾಗಿತ್ತು.

ಈಗ ಕೊರೋನರಿ ಸ್ಟೆಂಟ್ ಸೇರ್ಪಡೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನರಿ ಸ್ಟೆಂಟ್ ಅಳವಡಿಕೆ ಜೀವ ಉಳಿಸಲು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಕೊರೊನರಿ ಸ್ಟೆಂಟ್ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...