ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಗ್ರಾಹಕರಿಗೆ ಉಡುಗೊರೆ ನೀಡಿದೆ. ಬ್ಯಾಂಕ್ 29 ತಿಂಗಳ ನಂತರ ಸ್ಥಿರ ಠೇವಣಿಗಳ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಎಚ್‌ಡಿಎಫ್‌ಸಿ ಲಿಮಿಟೆಡ್ ವಿವಿಧ ಅವಧಿಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 0.25 ಕ್ಕೆ ಏರಿಸಿದೆ. ಹೊಸ ಬಡ್ಡಿ ದರಗಳು ಮಾರ್ಚ್ 30 ರಿಂದ ಜಾರಿಗೆ ಬಂದಿವೆ.
ಅಕ್ಟೋಬರ್ 2018 ರ ನಂತರ ಈಗ ಬಡ್ಡಿ ದರ ಏರಿಕೆಗೆ ಬ್ಯಾಂಕ್ ನಿರ್ಧರಿಸಿದೆ. 33 ರಿಂದ 99 ತಿಂಗಳುಗಳಲ್ಲಿ ಪಕ್ವವಾಗುವ ಎಫ್‌ಡಿಗಳ ಮೇಲಿನ ಬಡ್ಡಿ ದರಗಳನ್ನು ಶೇಕಡಾ 0.25ಕ್ಕೆ ಹೆಚ್ಚಿಸಿದೆ. 33 ತಿಂಗಳಲ್ಲಿ ಮುಕ್ತಾಯವಾಗುವ 2 ಕೋಟಿ ರೂಪಾಯಿಗಳ ಠೇವಣಿಗಳ ಮೇಲೆ ವಾರ್ಷಿಕ ಬಡ್ಡಿ ದರ ಶೇಕಡಾ 6.20 ರಷ್ಟಿರುತ್ತದೆ. 66 ತಿಂಗಳ ಅವಧಿಯ ಠೇವಣಿಗಳಿಗೆ ಶೇಕಡಾ 6.60 ರಷ್ಟು ಬಡ್ಡಿ ನೀಡಲಾಗುವುದು. 99 ತಿಂಗಳ ಅವಧಿಯ ಠೇವಣಿಗಳ ಮೇಲೆ ಬಡ್ಡಿ ದರವನ್ನು ಶೇಕಡಾ 6.65ರಷ್ಟಿರಲಿದೆ. ಹಿರಿಯ ನಾಗರಿಕರು ಸಾಮಾನ್ಯಕ್ಕಿಂತ ಎಫ್ಡಿ ಮೇಲೆ ಶೇಕಡಾ 0.25 ರಷ್ಟು ಹೆಚ್ಚಿನ ಬಡ್ಡಿ ಪಡೆಯುತ್ತಾರೆ.