ಐಟಿ ಕಂಪನಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಹೆಚ್ಸಿಎಲ್ ಕಂಪನಿಯ ಚೇರ್ ಪರ್ಸನ್ ರೋಶನಿ ನಾಡರ್ ಬರೋಬ್ಬರಿ 54850 ಕೋಟಿ ರೂಪಾಯಿಗಳ ಆದಾಯ ಹೊಂದುವ ಮೂಲಕ ದೇಶದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಬಯೋಕಾನ್ನ ಕಿರಣ್ ಮಜುಂದಾರ್ ಶಾ 36500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒಡೆತನ ಹೊಂದುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಹುರುನ್ ಇಂಡಿಯಾ ಹಾಗೂ ಕೋಟಕ್ ವೆಲ್ತ್ ಸಿದ್ಧಪಡಿಸಿದ ವ್ಯಕ್ತಿಗಳ ಸಾಲಿನಲ್ಲಿ 31 ಮಹಿಳೆಯರು ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.
ಸ್ವಯಂ ನಿರ್ಮಿತ ವಿಭಾಗದಲ್ಲಿ ಕಿರಣ್ ಮಜುಂದಾರ್ ಶಾ ಮುಂಚೂಣಿಯಲ್ಲಿದ್ದಾರೆ, ಜೊಹೋದ ರಾಧಾ ವೆಂಬು 11,590 ಕೋಟಿ ರೂಪಾಯಿ ಹಾಗೂ ಅರಿಸ್ಟಾ ನೆಟ್ವರ್ಕ್ಸ್ನ ಜಯಶ್ರೀ ಉಲ್ಲಾರ್ 10,220 ಕೋಟಿ ರೂಪಾಯಿ ಆಸ್ತಿ ಒಡೆತನ ಹೊಂದಿದ್ದಾರೆ. ಕುತೂಹಲಕಾರಿ ಅಂಶ ಅಂದರೆ ಹುರುನ್ ಸಿದ್ಧಪಡಿಸಿದ ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಶಾ, ಉಲ್ಲಾಲ್, ಹಾಗೂ ವೆಂಬು ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಈ ಪಟ್ಟಿಗೆ 32 ಮಂದಿ ಯಶಸ್ವಿ ಮಹಿಳೆಯರ ಕೊಡುಗೆ ನೀಡಿದ್ರೆ, ದೆಹಲಿಯಿಂದ 20 ಹಾಗೂ ಹೈದರಾಬಾದ್ನಿಂದ 10 ಮಂದಿ ಆಯ್ಕೆಯಾಗಿದ್ದಾರೆ.